(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.12: ವಿವಿಯ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಅನುದಾನ ಬರದಿದ್ದರೂ, ಡಿಎಂಎಫ್, ಕೆ.ಎಂ.ಅರ್.ಸಿ ಯೋಜನೆಯಡಿ ಅನುದಾನ ದೊರೆತಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಪತಿ ಸಿದ್ದು ಪಿ ಅಲಗೂರ ಹೇಳಿದ್ದಾರೆ.
ವಿವಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅವರು. ಕೋವಿಡ್ ನಂತರ ವಿವಿಗೆ ಸರ್ಕಾರದಿಂದ ಅಭಿವೃದ್ಧಿ ಯೋಜನೆಗಳಿಗೆ ಕೇವಲ 85 ಲಕ್ಷ ರೂ ಮಾತ್ರ ನೀಡಿದೆ. ಆದರೆ ಡಿಎಂಎಫ್ ಅನುದಾನದಡಿ 8.5 ಕೋಟಿ ರೂ ದೊರೆತಿದೆ. ಕೆಎಂಆರ್ ಸಿ ಅನುದಾನದಡಿ 20 ಕೋಟಿ ರೂ ದೊರೆತಿದೆ. ಇದರಿಂದ ಯುಟಿಲಿಟಿ ಬಿಲ್ಡಿಂಗ್, ಕಂಪ್ಯೂಟರ್, ಸಮಾಜ ಶಿಕ್ಷಣ ಕಟ್ಟಡಗಳ, ಒಳ ಚರಂಡಿ ವ್ಯವಸ್ಥೆ ಮೊದಲಾದವನ್ನು ಕೈಗೊಳ್ಳುತ್ತಿದೆಂದು ಹೇಳಿದರು.
ವಿವಿಗೆ ಅಲ್ಲಿಪುರ ದಾರದ ಮಿಲ್ ನ ಜಮೀನು ಹಸ್ತಾಂತರ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ಇದೆ ಎಂದರು.
ಗುತ್ತಿಗೆ ಆಧಾರಿತ ನೌಕರರಿಗೆ ವೇತನ ವಿಳಂಬ ಆಗಿಲ್ಲ. ವೇತನ ನೀಡಿಕೆಯಲ್ಲಿ ಆಗಿದ್ದ ವ್ಯತ್ಯಾಸದ ಹಣ ನೀಡುವ ಪ್ರಕ್ರಿಯೆ ನಡೆದಿದೆ. ಸಧ್ಯದಲ್ಲೇ ಅಸಗಲಿದೆಂದರು.
ಎನ್ಈಪಿ:
ಎನ್ ಈ ಪಿ ಪದ್ದತಿಯಲ್ಲಿ ಪ್ರವೇಶ ಪಡೆದವರು. ಅದೇ ಪದ್ದತಿಯಲ್ಲಿಯೇ ಪದವಿಗಳನ್ನು ಪಡೆಯುವರು. ಎನ್ ಈ ಪಿ ಪದ್ದತಿ ಬಗ್ಗೆ ಸರ್ಕಾರ ಕುಲಪತಿಗಳ ಸಭೆ ಕರೆದು ಅಭಿಪ್ರಾಯ ಕೇಳಿದೆ. ನಿರ್ಧಾರ ಹೇಳಿಲ್ಲ.
ಕೇಂದ್ರ ಎನ್ಇಫಿ ಪಾಲಿಸಲು ಆದೇಶ ನೀಡಿದೆ. ಅದನ್ನು ಅಳವಡಿಸಿಕೊಳ್ಳುವುದು ರಾಜ್ಯಗಳಿಗೆ ಬಿಟ್ಟಿದ್ದಾಗಿದೆ. ಒಂದೊಮ್ಮೆ ಕೇಂದ್ರ ಆಗಲೇ ಬೇಕು ಎಂಬುದಾದರೆ ಅದರ ಪರಿಣಾಮಗಳು ಬದಲಾಗಲಿವೆಂದರು.
ಸುದ್ದಿಗೋಷ್ಟಿಯಲ್ಲಿ ಕುಲಪತಿಗಳಾದ ಪ್ರೊ. ಎನ್.ಸಿ.ಪಾಟೀಲ್, ಪ್ರೊ.ರಮೇಶ್ ಓಲೇಕಾರ್ ಇದ್ದರು