ವಿವಿಯಲ್ಲಿ ವಿಶ್ವ ಪುಸ್ತಕ ದಿನಾಚರಣೆ

ರಾಯಚೂರು,ಏ.೨೬.ಇಂಗ್ಲಿಷ್ ಭಾಷೆ ದೇಶಭಕ್ತಿಯ ಅಥವಾ ಸಾಂಸ್ಕೃತಿಕ ಆಧಾರದ ಮೇಲೆ ನಿರ್ಲಕ್ಷಿಸಬೇಕಾದ ವಿಷಯವಲ್ಲ. ಈ ಭಾಷೆ ಆಧುನಿಕ ಕಾಲದ ಅಗತ್ಯವಾಗಿದ್ದು ವ್ಯಕ್ತಿತ್ವ ಬೆಳವಣಿಗೆಗೆ ಒಂದು ಸಾಧನವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ.ವಿಶ್ವನಾಥ ನುಡಿದರು.
ರಾಯಚೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ಏ ೨೩ ರ ದಿನವನ್ನು ಅಂತರಾಷ್ಟ್ರೀಯ ಇಂಗ್ಲಿಷ್ ಭಾಷಾ ದಿನವೆಂದು ಇಂಗ್ಲಿಷ್ ಸಾಹಿತ್ಯದ ಪ್ರಖ್ಯಾತ ನಾಟಕಕಾರ ವಿಲಿಯಂ ಶೇಕ್ಸ್‌ಪೀಯರ್ ರ ಜನ್ಮದಿನವೆಂದು ಹಾಗೂ ವಿಶ್ವ ಪುಸ್ತಕ ದಿನವೆಂದು ಆಯೋಜಿಸಿದ ಒಂದು ದಿನದ ವೆಬಿನಾರ್ ಕಾರ್ಯಕ್ರಮವನ್ನು ಕೊವಿಡ್ ಎರಡನೇ ಅಲೆ ಸಂಬಂಧ ಆನ್‌ಲೈನ್ ನಲ್ಲಿ ಆಚರಿಸಲಾಯಿತು ಉದ್ಘಾಟಕರಾಗಿ ಆಗಮಿಸಿದ ಅವರು ಮಾತನಾಡುತ್ತ ಶಿಕ್ಷಣ ಪೂರ್ಣಗೊಳ್ಳಲು ವಾಸ್ತವವಾಗಿ ಇಂಗ್ಲಿಷ್ ಭಾಷೆ ಮುಖ್ಯವಾಗಿದೆ. ಯಾವುದೇ ಸರ್ಕಾರಿ ಕೆಲಸ, ಉನ್ನತ ಶಿಕ್ಷಣ, ದಿನನಿತ್ಯ ಸಂಭಾಷೆಣೆಯಲ್ಲಿ ಸಂವಹನ ಪ್ರಧಾನ ವಿಧಾನ ಇಂಗ್ಲಿಷ್ ಭಾಷೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷಸ್ಥಾನ ವಹಿಸಿದ ವಿಶೇಷಾಧಿಕಾರಿ ಪ್ರೊ. ಪಾರ್ವತಿ ಸಿ.ಎಸ್. ಮಾತನಾಡುತ್ತ”ಭಾಷೆಗಳು ಸಂವಹನ ಸಾಧವಾಗಿದ್ದು ಅವು ನಮ್ಮ ಆಲೋಚನೆಗಳನ್ನು ಪದಗಳಾಗಿ ಇರಿಸಲು ಸಹಕಾರಿಯಾಗಿವೆ. ಇಂದು ಜಗತ್ತಿನಲ್ಲಿ ಸಾವಿರಾರು ಭಾಚೆಗಳಿವೆ ಆದರೆ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಇಂಗ್ಲಿಷ್ ಭಾಷೆ ವಿಶೇಷ ಸ್ಥಾನದಲ್ಲಿದೆ.ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತಾ, ಸಂವಹನ ಮಾಡುತ್ತ ಎಡವಿದರೂ ಮತ್ತೆ ಪ್ರಯತ್ನಿಸುತ್ತಾ ಹೋದಂತೆ ಇಂಗ್ಲಿಷ್ ಕಲಿಕೆ ಸರಳವಾಗುವುದು” ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕರಾದ ಇಂಗ್ಲಿಷ್ ಉಪನ್ಯಾಸಕ ಅನಿಲ್ ಅಪ್ರಾಳ್ ಆಂಗ್ಲಭಾಷೆ ಬೆಳೆದು ಬಂದ ದಾರಿ, ವಿಲಿಯಂ ಶೆಕ್ಸ್‌ಪೀಯರ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತ, ಜನರಲ್ಲಿ ಓದುವ, ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು, ಕೃತಿಸ್ವಾಮ್ಯ ಕುರಿತು ಜಾಗೃತಿ ಮೂಡಿಸಲು ವಿಶ್ವಪುಸ್ತಕ ದಿನವೆಂದು ಆಚರಿಸಲಾಗುವುದು ಎಂದು ಪ್ರಾಸ್ತಾವಿಕವಾಗಿ ನುಡಿದರು.
ಐ.ಟಿ. ವಿಭಾಗದ ಉಪನ್ಯಾಸಕರಾದ ಡಾ.ಶ್ರೀಮಂತ ಸುಧೀರ್, ಡಾ.ಲಕ್ಷ್ಮೀಕಾಂತ ಇಂಗ್ಲಿಷ್ ಸಂವಹನ ಕೌಶಲ್ಯ ಕುರಿತು ಮಾರ್ಗದರ್ಶನ ಮಾಡಿದರು. ಇಂಗ್ಲಿಷ್ ವಿದ್ಯಾರ್ಥಿಗಳು ಆನ್‌ಲೈನ್ ಪ್ರಬಂಧ ಮಂಡನೆ, ಕಾವ್ಯವಾಚನ, ರಸಪ್ರಶ್ನೆಯಂತಹ ಕಾರ್ಯಕ್ರಮ ನಡೆಸಿದರು. ಡಾ.ನುಸೃತ್ ಫಾತಿಮಾ- ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಲ್ಲದೆ ಆನ್‌ಲೈನ್ ಕಾರ್ಯಕ್ರಮದಲ್ಲಿ ರಾಯಚೂರು ವಿಭಾಗದ ಹಲವಾರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಯಚೂರು ವಿಶ್ವವಿದ್ಯಾಲಯದ ಬೋಧಕ ವರ್ಗ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಅಶ್ವಿನಿ ಮಲಘಂ ಸ್ವಾಗತಿಸಿದರೆ, ರಾಧಾ ದೌಲಣ್ಣ ವಂದಿಸಿದರು.