ವಿವಿಯಲ್ಲಿ ಕೊರೋನಾ ಜಾಗೃತಿ ಅಭಿಯಾನ

ಕಲಬುರಗಿ:ಎ.27:ಕೋವಿಡ್-19 ರೋಗವು ವಿಶ್ವದ್ಯಾಂತ ಹರಡಿ ಲಕ್ಷಾಂತರ ಜನರು ಜೀವ ಕಳೆದುಕೊಳ್ಳುತಿದ್ದಾರೆ. ಇದಕ್ಕೆ ಕಾರಣ ರೋಗ ಹರಡುವಿಕೆಯ ಬಗ್ಗೆ ಮತ್ತು ವಿಶ್ವಸಂಸ್ಥೆ ವಿಧಿಸಿರುವ ನಿಯಮಗಳನ್ನು ಪಾಲಿಸದೇ ಇರುವದರಿಂದ ರೋಗವು ಅತ್ಯಂತ ಭಯಂಕರ ಹರಡುತ್ತಿದೆ ಆದುದರಿಂದ, ಕರ್ನಾಟಕ ಸರ್ಕಾರದ ಆದೇಶದಂತೆ, ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶವು ಕಲಬುರಗಿ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ವಾಹನದ ಮುಖಾಂತರ ತೆರಳಿ ಕೋವಿಡ-19 ವೈರಸ್ ಸೋಂಕು ತಡೆಯಲು ಮಾಸ್ಕ ಹಾಕಿಕೊಳ್ಳುವುದು ಸಾಬೂನಿನಿಂದ ಕೈತೊಳೆಯುವುದು ಹಾಗೂ ದೈಹಿಕ ಅಂತರವನ್ನು ಪಾಲನೆ ಮಾಡುವುದು ಕ್ರಮಗಳ ಕುರಿತು ಜನರಲ್ಲಿ ಧ್ವನಿವರ್ಧಕ ಮೂಲಕ ಜಾಗ್ರತಿ ಮೂಡಿಸುವುದು, ಗುಲಬರ್ಗಾ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ ಜಾಗೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ದಯಾನಂದ ಅಗಸರ್ ಚಾಲನೆ ನೀಡಿ ತಮ್ಮ ನುಡಿಯಲ್ಲಿ ಸರ್ಕಾರದ ಆದೇಶದಂತೆ ಧ್ವನಿವರ್ಧಕ ಮೂಲಕ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ, ನಗರದಲ್ಲಿ ಹಾಗೂ ಸೂತ್ತಮುತ್ತಲಿನ ಹಳ್ಳಿಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು ಹಾಗೂ ಕೋವಿಡ್-19 ನಿಯಮಗಳನ್ನು ವಿಶ್ವವಿದ್ಯಾಲಯ ಆವರಣದಲ್ಲಿ ಕಡ್ಡಾಯವಾಗಿ ಪಾಲಿಸಲು ತಿಳಿಸಿದರು ಹಾಗೂ ವಿಶ್ವವಿದ್ಯಾಲಯ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನ್ ನೀಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.