ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕ

ನವದೆಹಲಿ, ಜು.29 – ದೇಶದ ವಿವಿಧ ರಾಜ್ಯಗಳಾದ ಹಿಮಾಚಲ ಪ್ರದೇಶ, ತೆಲಂಗಾಣ, ಬಾಂಬೆ ಕಲ್ಕತ್ತಾ, ಗೌಹಾಟಿ, ಕೇರಳ ಮತ್ತು ಛತ್ತೀಸ್‌ಗಢ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕ ಮತ್ತು ಬಡ್ತಿ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ವಿವಿಧ ಹೈಕೋರ್ಟ್ ಗಳಿಗೆ ನ್ಯಾಯಾಧೀಶರ ನೇಮಕ ಶಿಫಾರಸ್ಸು ಮಾಡಿದ್ದರು. ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ವಕೀಲರಾದ ರಂಜನ್ ಶರ್ಮಾ, ಬಿಪಿನ್ ಚಂದರ್ ನೇಗಿ‌ ಮತ್ತು ನ್ಯಾಯಾಂಗ ಅಧಿಕಾರಿ ರಾಕೇಶ್ ಕೈಂತ್ಲಾ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಿ ಅಂಕಿತ ಹಾಕಿದ್ದಾರೆ.

ಕಾನೂನು ಮತ್ತು ನ್ಯಾಯ ಸಚಿವಾಲಯದದ ಶಿಫಾರಸ್ಸು ಆಧರಿಸಿ ರಾಷ್ಡ್ರಪತಿ ದ್ರೌಪದಿ ಮುರ್ಮು ಅವರು ವಕೀಕರಾದ ಎಲ್.ಎನ್. ಅಲಿಶೆಟ್ಟಿ, ಎ.ಕೆ. ಜುಕಾಂತಿ,ಮತ್ತು ನ್ಯಾಯಾಂಗ ಅಧಿಕಾರಿ ಸುಜನಾ ಕಲಾಸಿಕಂ ಅವರನ್ನು ತೆಲಂಗಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ ಮಾಡಿದ್ದಾರೆ.‌

ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾದ ಎ.ಎಲ್.ಪನ್ಸಾರೆ ಮತ್ತು ಎಸ್.ಸಿ.ಮೋರೆ ಅವರನ್ನು ಬಾಂಬೆ ಹೈಕೋರ್ಟ್‌ಗಳ ಖಾಯಂ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿಗಳಾದ ಕೃಷ್ಣರಾವ್, ಬಿಭಾಸ್ ರಂಜನ್ ಡಿ ಮತ್ತು ಅಜೋಯ್ ಕುಮಾರ್ ಮುಖರ್ಜಿ, ಕಲ್ಕತ್ತಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರು ಸಹ ಕಲ್ಕತ್ತಾ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ನೀಡಲಾಗಿದೆ

ನ್ಯಾಯಮೂರ್ತಿಗಳಾದ ಕಾಖೆಟೊ ಸೆಮಾ, ದೇವಾಶಿಸ್ ಬರುವಾ, ಮಾಲಾಶ್ರೀ ದೇವ್ ಚೌಧರಿ, ಹೆಚ್ಚುವರಿ ಅವರನ್ನು ಗೌಹಾಟಿ ಹೈಕೋರ್ಟ್‌ಗೆ ಖಾಯಂ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.

ನ್ಯಾಯಮೂರ್ತಿಗಳಾದ ಬಸಂತ್ ಬಾಲಾಜಿ, ಸಿ.ಕೆ. ಜಯಚಂದ್ರನ್, ಸೋಫಿ ಥಾಮಸ್ ಮತ್ತು ಪಿ.ವಿ.ಜಿ.ಪಿ. ಅಜಿತ್‌ಕುಮಾರ್, ಕೇರಳ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನು ಕೇರಳ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಿ ಅಧಿಸೂಚನೆ ಹೊರಡಿಸಲಾಗಿದೆ.

ಅಧಿಸೂಚನೆಯಲ್ಲಿ ನ್ಯಾಯಮೂರ್ತಿ ದೀಪಕ್ ಕುಮಾರ್ ತಿವಾರಿ ಅವರನ್ನು ಛತ್ತೀಸ್‌ಗಢ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಿಂದ ಛತ್ತೀಸ್‌ಗಢ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.