ವಿವಿಧ ಸ್ಪರ್ಧೆ: ವಿಜೇತರಿಗೆ ಬಹುಮಾನ

ಮುನವಳ್ಳಿ,ಸೆ5: ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ರವಿವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆನಂದ ಚೋಪ್ರಾ ಅಭಿಮಾನಿ ಬಳಗದ ವತಿಯಿಂದ ಮುಕ್ತ ರಂಗೋಲಿ ಸ್ಪರ್ಧೆ ಹಾಗೂ 1 ರಿಂದ 6 ವರ್ಷದ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆ ಜರುಗಿತು.
ಸೌರಭ ಆನಂದ ಚೋಪ್ರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಬ್ಬ ಹರಿದಿನಗಳಲ್ಲಿ ಮಕ್ಕಳು ಮಹಿಳೆಯರು ಕ್ರಿಯಾಶೀಲರಾಗಿ ಭಯಭಕ್ತಿಯಿಂದ ಕಾರ್ಯನಿರ್ವಹಿಸುವುದರಿಂದ ದೈವ ಕೃಪೆಗೆ ಪಾತ್ರರಾಗುತ್ತಾರೆ. ಮಹಿಳೆಯರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅವರಿಗೆ ಸಕಲ ರೀತಿಯಿಂದ ಪ್ರೋತ್ಸಾಹ ನೀಡವುದಾಗಿ ಹಾಗೂ ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಭಾಗವಹಿಸುತ್ತಿರುವದು ಶ್ಲಾಘನೀಯವಾಗಿದ್ದು, ಅವರಿಗೆ ನೈತಿಕ ಬೆಂಬಲ ನೀಡುವುದು ಅವಶ್ಯವಾಗಿದೆ ಎಂದರು.
ಸಾನಿಧ್ಯವನ್ನು ಶಿಂದೋಗಿಯ ಮಡಿವಾಳಯ್ಯ ಹಿರೇಮಠ ವಹಿಸಿದ್ದರು, ಬಸವಸೇನೆ ಗೌರಾವಾಧ್ಯಕ್ಷ ಉಮೇಶ ಬಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿವರ್ಷವೂ ವಿಶೇಷ ಹೆಣ್ಣು ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಈ ವರ್ಷ ಮಕ್ಕಳಿಗಾಗಿ ಈ ಬಾರಿ ರಂಗೋಲಿ ಹಾಗೂ ವೇಷಭೂಷಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಪುರಸಭೆ ಸದಸ್ಯರಾದ ಡಿ.ಡಿ.ಕಿನ್ನೂರಿ, ಸಲೀಮ ಬೆಳವಡಿ, ವಿನಾಯಕ ಕಟ್ಟೇಕಾರ, ನಿಖಿಲ ಬಾಳಿ, ಪಂಚನಗೌಡ ಕಳಸನಗೌಡ್ರ, ಬಸವರಾಜ ಕಡಕೋಳ, ಸಲ್ಮಾನ ಚೂರಿಖಾನ, ಸವಿತಾ ಬಾಳಿ, ಶಾಂತವ್ವ ಬಡೆಮ್ಮಿ, ಗೀತಾ ಅಕ್ಕಿ, ಮಂಗಲಾ ಯರಗುದ್ದಿ, ಅನ್ನಪೂರ್ಣ ಹಿರೇಮಠ, ಬಾಳು ಹೊಸಮನಿ ಇತರರು ಉಪಸ್ಥಿತರಿದ್ದರು.
ನಿರ್ಣಾಯಕರಾಗಿ ಸವಿತಾ ಹಂಜಿ, ಶಿಲ್ಪಾ ರಾಮಜಾರ, ಟಿ.ಎನ್ ಮುರಂಕರ, ರಾಜಶೇಖರ ಮಲ್ಲಾಪೂರಮಠ.
ರಂಗೋಲಿ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದವರಿಗೆಲ್ಲ ಸಮಾಧಾನಕರ ಬಹುಮಾನ ವಿತರಿಸಿದರು.
ಬಾಳು ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.