ವಿವಿಧ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ

ಕನಕಪುರ.ಮೇ೨೯: ತಾಲ್ಲೂಕಿನ ಕಾಳೇಗೌಡನದೊಡ್ಡಿ ಬಳಿಯಿರುವ ಲಗುನಾ ಕ್ಲಾತಿಂಗ್ ಗಾರ್ಮೆಂಟ್ಸ್ ನವರು ಕೊರೊನಾ ಪ್ರೆಂಟ್ ಲೈನ್ ವರ್ಕರ್‌ಗಳಾಗಿ ಕೆಲಸ ಮಾಡುತ್ತಿರುವ ಪಂಚಾಯಿತಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಶುಕ್ರವಾರ ಕೋವಿಡ್ ಕಿಟ್ ವಿತರಣೆ ಮಾಡಿದರು.
ಕೊರೊನಾ ಸೋಂಕು ತಡೆಗಾಗಿ ಬಳಸುವ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್, ಟೆಂಪರೇಚರ್ ಮಿಷನ್ ಒಳಗೊಂಡ ಕಿಟ್‌ಗಳನ್ನು ಗಾರ್ಮೆಂಟ್ಸ್‌ನ ಸಿಬ್ಬಂದಿಗಳು ಪಂಚಾಯಿತಿ, ಆರೋಗ್ಯ ಕೇಂದ್ರ, ಪೊಲೀಸ್ ಠಾಣೆಗೆ ತೆರಳಿ ಹಸ್ತಾಂತರಿಸಿದರು.
ಗಾರ್ಮೆಂಟ್ಸ್‌ನ ಮ್ಯಾನೇಜರ್ ಸದಾಶಿವ ಮಾತನಾಡಿ ಸಮಾಜದೊಟ್ಟಿಗೆ ನಾವು ಬೆಳೆಯುತ್ತಿದ್ದೇವೆ. ಸಮಾಜ ಕಷ್ಟಕ್ಕೆ ಸಿಲುಕಿದಾಗ ನಮ್ಮ ಕೈಲಾದ ಸಹಾಯ ಮಾಡುವುದು ನಮ್ಮ ಜವಬ್ದಾರಿ ಹಾಗೂ ಕರ್ತವ್ಯವಾಗಿದೆ. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿದ್ದು, ಸೋಂಕು ತಡೆ ಹೋರಾಟದಲ್ಲಿ ನಾವು ಕೈ ಜೋಡಿಸಬೇಕಿದೆ. ಅದಕ್ಕಾಗಿ ಬೆಡ್‌ಗಳ ಮೇಲೆ ಹಾಸುವ ಸುಮಾರು ೩ ಲಕ್ಷ ವೆಚ್ಚದ ಬಟ್ಟೆ ಹಾಗೂ ಕೋವಿಡ್ ಕಿಟ್‌ಗಳನ್ನು ವಾರಿಯರ್ಸ್‌ಗೆ ಕೊಟ್ಟಿರುವುದಾಗಿ ತಿಳಿಸಿದರು.