
ಕಲಬುರಗಿ,ಆ.26: ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ನಿರಗುಡಿ ಅವರ 56ನೇ ಜನ್ಮ ದಿನಾಚರಣೆ ವಿವಿಧೆಡೆ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಆಚರಿಸಲಾಯಿತು.
ಮಳೆ- ಬೆಳೆ ಇಲ್ಲದಿರುವುದರಿಂದ ದೇಶಕ್ಕೆ ಅನ್ನ ನೀಡುವ ರೈತ ಸಂಕಷ್ಟದಲ್ಲಿರುವುದರಿಂದ ಜನ್ಮ ದಿನಾಚರಣೆ ಬೇಡ ಎಂದು ಪೂಜ್ಯರು ಹೇಳಿದ್ದರೂ ಭಕ್ತಾಧಿಗಳು ಸರಳವಾಗಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಜನ್ಮ ದಿನಾಚರಣೆ ಆಚರಿಸಿದರು.
ಅಲೆಮಾರಿ ಜನಾಂಗದವರಿಗೆ ಸಾಮಾಗ್ರಿ ವಿತರಣೆ: ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ಆಳಂದ ತಾಲುಕು ಘಟಕದ ಅಧ್ಯಕ್ಷರಾದ ಮಂಜುನಾಥ ಬಿರಾದಾರ ಅವರ ನೇತ್ರತ್ವದಲ್ಲಿ ಆಳಂದ ನಗರದ ಹೊರವಲಯದಲ್ಲಿರುವ ಅಲೆಮಾರಿ ಜನಾಂಗದವರಿಗೆ ಆಹಾರ ಸಾಮಗ್ರಿಗಳ ಕಿಟ್, ಬೆಡ ಶೀಟ, ಹೊದಿಕೆಗಳನ್ನು ವಿತರಿಸುವದರೊಂದಿಗೆ ಹಾಗು ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿಕಿತ್ಸಾರ್ಥಿಗಳಿಗೆ ಹಣ್ಣು – ಹಂಪಲು ವಿತರಣಿ ಮಾಡುವದರೊಂದಿಗೆ ಸರಳವಾಗಿ ಆಚರಿಸಲಾಯಿತು.
ಆಳಂದ ಚೆಕಪೆÇಸ್ಟ ಬಳಿ ಇರುವ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹ ರಾಜರ ನಿರಂತರ ಅನ್ನದಾಸೋಹ ಕೇಂದ್ರದಲ್ಲಿ ಪರಮ ಪೂಜ್ಯರ 56 ನೇ ವರ್ಷದ ಜನ್ಮ ದಿನೋತ್ಸವ ಆಚರಿಸಲಾಯಿತು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ: ಜೈ ಭಾರತ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸಂದೇಶ ಪವಾರ ಅವರ ನೇತೃತ್ವದಲ್ಲಿ ಕಲಬುರಗಿ ಹೊರವಲಯದಲ್ಲಿ ವಾಸವಾಗಿರುವ ಅಲೆಮಾರಿ ಬಡಜನರಿಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರೊಂದಿಗೆ ಪೂಜ್ಯರ ಜನ್ಮ ದಿನ
ವಿನೂತನವಾಗಿ ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸೈನಿಕರಿಗೆ- ರೈತರಿಗೆ ಸನ್ಮಾನ: ನಗರದ ಹೀರಾಪುರ ಬಳಿಯ ಗಣೇಶಲಿಂಗ ಹವಾ ಮಲ್ಲಿನಾಥ ಆಶ್ರಮದಲ್ಲಿ ಸೈನಿಕರು, ರೈತರಿಗೆ, ವೈದ್ಯರು ಸೇರಿ ಇತರ ಸಾಮಾಜಿಕ ಸೇವಾ ಕಾರ್ಯಕರ್ತರಗೆ ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಸಾವಿರಾರು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಪ್ರಧಾನಮಂತ್ರಿ ವಿಮಾ ಪರಿಹಾರ ಅಡಿ ಐವರು ಕಾರ್ಮಿಕ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಪರಿಹಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾದನಹಿಪ್ಪರಗಾದ ಅಭಿನವ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಚಿನ್ಮಯಗಿರಿ ಮಹಾಂತಪುರದ ವೀರ ಮಹಾಂತ ಶಿವಾಚಾರ್ಯ ರು, ಜೈ ಭಾರತ ಮಾತಾ ಸೇವಾಸಮಿತಿಯ ರಾಷ್ಟ್ರೀಯ ವಕ್ತಾರರಾದ ವೈಜನಾಥ ಝಳಕಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಧುತ್ತರಗಾಂವದ ಲಕ್ಷ್ಮೀ ದೇವಿ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಸಮಿತಿಯ ಪ್ರಮುಖರಾದ ಸಂದೇಶ ಪವಾರ, ಮಂಜುನಾಥ ಬಿರಾದಾರ, ರಾಜಶೇಖರ ರೆಡ್ಡಿ, ಸಮಾಜದ ಮುಖಂಡರಾದ
ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಸಂತೋಷ ಬಿಲಗುಂದಿ, ಶರಣಬಸಪ್ಪ ಹೀರಾ ಸೇರಿದಂತೆ ಮುಂತಾದವರಿದ್ದರು.