ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ

ನವಲಗುಂದ,ಮಾ27 ಃ ವಯೋವೃದ್ಧರು ನಿರ್ಗತಿಕರಿಗೆ ಯಾವುದೇ ತೊಂದರೆಯಾಗದಂತೆ ಸರಕಾರದಿಂದ ದೊರಕುವ ಪಿಂಚಣೆಯನ್ನು ಸಕಾಲದಲ್ಲಿ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಗ್ರಾಮಗಳಿಗೆ ಭೇಟಿ ನೀಡಿ ಪಿಂಚಣೆ ಅದಾಲತ್ ಜತೆಗೆ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಸಾದ್ಯವಾದಷ್ಟು ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ಶುಕ್ರವಾರ ಸಂಜೆ ತಾಲುಕಿನ ಹೆಬ್ಬಾಳ ಗ್ರಾಮದ ಸಿದ್ದಾರೂಢ ಮಠದಲ್ಲಿ ಆಯೋಜಿಸಿದ್ದ ಪಿಂಚಣೆ ಅದಾಲತ್ ಕಾರ್ಯಕ್ರವನ್ನು ಉದ್ಘಾಟಿಸಿ ನಾನಾಯೋಜನೆಯಡಿಯ ಪಿಂಚಣೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು ಗ್ರಾಮದಲ್ಲಿನ ಸಮಸ್ಯೆಗಳ ಕುರಿತಾಗಿ ಜನರೊಂದಿಗೆ ಚರ್ಚಿಸಿದರು.

ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಪಶುಸಂಗೋಪನೆ ಆಸ್ಪತ್ರೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಸ್ಥಾಪಿಸಬೇಕು ಮತ್ತು ಗ್ರಾಮದಲ್ಲಿನ ಎಸ್ಸಿ ಕಾಲೂನಿಯಲ್ಲಿ ರಸ್ತೆಗಳ ದುರಸ್ಥಿ ಮಾಡಿಸುವಂತೆ ಆಗ್ರಹಿಸಿ ಮನವಿ ಮಾಡಿದರು. ಜತೆಗೆ ಗ್ರಾಮದಲ್ಲಿರು ಹೊಸ ಗ್ರಾಪಂ ಕಟ್ಟಡವು ಹೋರವಲಯದಲ್ಲಿರುವದರಿಂದ ಗ್ರಾಮಸ್ಥರಿಗೆ ಸಮಸ್ಯೆ ಎದರಿಸಬೇಕಾಗುತ್ತದೆ. ಸದ್ಯ ಗ್ರಾಮದಲ್ಲಿರುವ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದರು. ಹಾಗೂ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಒತ್ತಾಯಿಸಿದರು.
ಎಲ್ಲ ಸಮಸ್ಯೆಗಳಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಯಾರಾದರೂ ಆಶ್ರಯ ಯೋಜನೆಗೆ ಜಮೀನು ನೀಡಲು ಮುಂದಾದಲ್ಲಿ ಎಕರೆಗೆ ತಲಾ 9ಲಕ್ಷರೂಗಳ ವೆಚ್ಚದಲ್ಲಿ ಶಾಸಕರ ಅನುದಾನದಡಿ ಖರೀದಿಸಲು ಸರಕಾರ ಬದ್ದಾವಾಗಿದ್ದು, ನಂತರ ಅದೇ ಜಮೀನಿನಲ್ಲಿ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಲಾಗುವುದೆಂದರು. ಗ್ರಾಮಸ್ಥರ ನಾನಾ ಬೇಡಿಕೆಗೆ ಸ್ಪಂದಿಸಿದರು.
ಗ್ರಾಮದಲ್ಲಿ ಪಿಂಚಣೆ ಸಮಸ್ಯೆಗಳ ಕುರಿತಾಗಿ ಓಟ್ಟು 12 ಅರ್ಜಿಗಳು ಸಲ್ಲಿಕೆಯಾದರೆ. 10ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದರು.
ನಂತರ ಬಳ್ಳೂರ ಗ್ರಾಮದಲ್ಲಿನ ಕುಡಿಯುವ ನೀರಿನ ಕೆರೆಗೆ ಕಾವಲುಗಾರರಿಲ್ಲದಿರುವುದರಿಂದ ಸ್ವಚ್ಛತೆ ಇಲ್ಲದಂತಾಗಿದೆ. ನೀರು ಕುಡಿಯಲು ಬಂದ ಪ್ರಾಣಿಗಳು ಕೆರೆಯಲ್ಲಿ ಬಿದ್ದು ಸಾಯುತ್ತಿರುವುದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದೆ ಹೀಗಾಗಿ ಕೆರೆಗೆ ಕಾವಲುಗಾರರನ್ನು ನೇಮಿಸಬೇಕು.
ಆಶ್ರಯ ಯೋಜನೆಯಡಿ ಮನೆ ನಿರ್ಮಿಸಬೇಕು ಹಾಗೂ ಗ್ರಾಮದಲ್ಲಿ ಸ್ಮಶಾನ ನಿಮಾಣಕ್ಕೆ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಗ್ರಾಮಸ್ಥರ ಅಹವಾಲನ್ನು ಆಲಿಸಿದ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಹಾಗೂ ಸ್ಮಶಾನಕ್ಕೆ ಜಾಗ ನೀಡಲು ಯಾರಾದರೂ ರೈತರು ಜಮೀನು ನೀಡಲು ಮುಂದೆ ಬಂದಲ್ಲಿ ಕೂಡಲೆ ವ್ಯವಸೇ ಕಲ್ಪಿಸಲಾಗುವುದು ಎಂದರಲ್ಲದೇ ಗ್ರಾಮದ ಕರೆಗೆ ಕಾವಲಗಾರರನ್ನು ನೇಮಕ ಮಾಡುವ ಕುರಿತು ಗ್ರಾಮ ಪಂಚಾಯತ್ ಪಿಡಿಒ ಅವರಿಗೆ ಸೂಚಿಸಿದರು.
ತಹಶೀಲ್ದಾರ ನವೀನ್ ಹುಲ್ಲೂರ ಸೇರಿದಂತೆ ತಾಲುಕಾ ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.