ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರಿಂದ ಸ್ವೀಕರಿಸಲಾದ ಆಕ್ಸಿಜನ್ ಕಾನ್ಸಂಟ್ರೇಟರ್ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಹಂಚಿಕೆ

ವಿಜಯಪುರ, ಮೇ.28-ಜಿಲ್ಲೆಯಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಇದ್ದು, ಹಲವಾರು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಸ್ವಯಂ ಪ್ರೇರಿತದಿಂದ ಕೊಡಮಾಡಿದ ಆಕ್ಸಿಜನ್ ಕಾನ್ಸಂಟ್ರೇಟರ್ (ಔxಥಿgeಟಿ ಅoಟಿಛಿeಟಿಣಡಿಚಿಣoಡಿ) ಗಳನ್ನು ಸ್ವೀಕರಿಸಿ, ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ತಿಳಿಸಿದ್ದಾರೆ.
ದಿ.15-05 2021 ರಿಂದ 24-06-2021 ರವರಿಗೆ ವಿವಿಧ ದಾನಿಗಳಿಂದ ಸಂಘ /ಸಂಸ್ಥೆಗಳಿಂದ ಸ್ವೀಕೃತವಾದ ಹಾಗೂ ಕಚೇರಿಯಿಂದ ಖರೀದಿಸಲಾದ ಆಕ್ಸಿಜನ್ ಕಾನ್ಸಂಟ್ರೇಟರ್/ ವೆಂಟಿಲೇಟರ್ಸ ಗಳ ವಿವರ ಹಾಗೂ ಹಂಚಿಕೆ ಮಾಡಿದ ವಿವರ ಈ ಕೆಳಕಂಡಂತೆ ಇದೆ.
ರೆಡ್ ಕ್ರಾಸ್ ಏಜೆನ್ಸಿ ಯಿಂದ 2 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1 ವೆಂಟಿಲೇಟರ್‍ಗಳನ್ನು ನೀಡಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ಹಂಚಿಕೆ ಮಾಡಲಾಗಿದೆ, ಫ್ಯಾಮಿಲಿ ಟ್ರಸ್ಟ್ ಉಡುಪಿ ಜೆ. ಎಸ್. ಶಂಕರ್ ವತಿಯಿಂದ ನೀಡಿದ 10 ಆಕ್ಸಿಜನ್ ಕಾನ್ಸಂಟ್ರೇಟರ್ ಇವುಗಳಲ್ಲಿ ಇಂಡಿ ತಾಲೂಕ ಆಸ್ಪತ್ರೆಗೆ-06 ಹಾಗೂ ಸಿಂದಗಿ ತಾಲೂಕ ಅಸ್ಪತ್ರೆಗೆ- 04 ನೀಡಲಾಗಿದೆ, ಸತೀಶ್ ಅಂಬಾಟಿ ಫೌಂಡರ್ ಮತ್ತು ಸಿ.ಇ. ಒ ಊ2o ಮೌಂಟೇನ್ ವ್ಯೂ ಕ್ಯಾಲಿಫೆÇೀರ್ನಿಯಯಿಂದ ನೀಡಿದ 5 ಆಕ್ಸಿಜನ್ ಕಾನ್ಸಂಟ್ರೇಟರ್ ಬಸವನಬಾಗೇವಾಡಿ ಜಿಲ್ಲಾಸ್ಪತ್ರೆಗೆ ಹಾಗೂ 5 ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ನೀಡಲಾಗಿರುತ್ತದೆ, ಡೋರ್ರೆನ್ 304. ಪ್ರೆಸ್ಟೀಜ್ ಪೆಂಟಾ ಈವಾ ಮಾಲ್ ದಿಂದ ಜಿಲ್ಲಾಡಳಿತವು ಖರೀದಿ ಮಾಡಿದ 10ಆಕ್ಸಿಜನ್ ಕಾನ್ಸಂಟ್ರೇಟರ್ ಇವುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ನೀಡಲಾಗಿರುತ್ತದೆ, ಸೆಂಟರ್ ಫಾರ್ ನೊನ್-ಫಾರ್ಮಲ್ ಎಜುಕೇಶನ್ ಏಜನ್ಸಿ ವಿಜಯಪುರ್ ಯಿಂದ 5 ಆಕ್ಸಿಜನ್ ಕಾನ್ಸಂಟ್ರೇಟರ್ ಇವುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆನೀಡಲಾಗಿರುತ್ತದೆ.
ಮುಖ್ಯ ಮೇಲ್ವಿಚಾರಕರು (ಉಪಕರಣ) ಕೆ.ಎಸ್ ಎಮ್.ಎಸ್.ಸಿ.ಎಲ್ ಬೆಂಗಳೂರು ಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ 30, ನೀಡಿದ್ದು ಇವುಗಳಲ್ಲಿ, 10-ವಿಜಯಪುರ ಜಿಲ್ಲಾ ಆಸ್ಪತ್ರೆಗೆ, 5-ತಾಲೂಕ ಆಸ್ಪತ್ರೆ ಇಂಡಿ, 5-ತಾಲೂಕ ಆಸ್ಪತ್ರೆ ಸಿಂದಗಿ, 5-ತಾಲೂಕ ಆಸ್ಪತ್ರೆ ಮುದ್ದೇಬಿಹಾಳ, 5-ತಾಲೂಕು ಬಸವನಬಾಗೇವಾಡಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.