ವಿವಿಧ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ

ಸೇಡಂ, ಮೇ, 30: ತಾಲೂಕಿನಲ್ಲಿ 215 ಪ್ರಾಥಮಿಕ ಶಾಲೆಗಳು ಹಾಗೂ 31 ಪ್ರೌಢಶಾಲೆಗಳು ಇದ್ದು, ಇಂದಿನಿಂದ 2024 -25 ನೇ ಸಾಲಿನ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವಾಗಿದು ಇಂದು ಮಳಖೇಡ ಸರಕಾರಿ ಬಾಲಕರ ಪ್ರೌಢ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಹಾಗೂ ತಾಪಂ ಇಓ ಚನ್ನಪ್ಪ ರಾಯಣ್ಣನವರ ಬೇಟಿ ನೀಡಿ ಪರಿಶೀಲಿಸಿದರು. ಈ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯರು ಸಹ ಶಿಕ್ಷಕರು ಇದ್ದರು.

ಸರ್ಕಾರಿ ಶಾಲೆಗಳು ಆರಂಭವಾಗಿದ್ದು ಶಾಲೆಗಳಲ್ಲಿ ಇರುವಂತಹ ಶೌಚಾಲಯ ಶಾಲಾ ಕೊಠಡಿಗಳ ದುರಸ್ತಿ ಸೇರಿದಂತೆ ಒಟ್ಟಾರೆಯಾಗಿ ಹಲವು ಕೊರತೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಂದ ತಕ್ಷಣ ಮಾಹಿತಿ ಪಡೆದು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.
ಚನ್ನಪ್ಪ ರಾಯಣ್ಣನವರ

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇಡಂ

ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದು, ನಮ್ಮ ಇಲಾಖೆ ಹಾಗೂ ತಾಲೂಕು ಪಂಚಾಯಿತಿಯ ನರೇಗಾ ಯೋಜನೆಯಡಿ ಶಾಲಾ ಕಂಪೌಂಡ್ ಶೌಚಾಲಯ, ದುರಸ್ತಿಗಳಿಗೆ ತಕ್ಷಣ ಇತ್ತುಕೊಳ್ಳಲಾಗುವುದು.
ಮಾರುತಿ ಹುಜರಾತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇಡಂ