
ದಾವಣಗೆರೆ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರ ಪತ್ನಿ ಶ್ರೀಮತಿ ಲತಾ ನಾಗರಾಜ್ ಲೋಕಿಕೆರೆ ಅವರು ಇಂದೂ ಸಹ ವಿವಿಧ ವಾರ್ಡ್ ವ್ಯಾಪ್ತಿಯಲ್ಲಿ ಪತಿ ಪರ ಬಿರುಸಿನ ಮತ ಪ್ರಚಾರ ನಡೆಸಿದರು.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 44ನೇ ವಾರ್ಡ್ ಶಾಂತಿ ನಗರ, ವಿನಾಯಕ ನಗರ ಭಾಗಗಳಲ್ಲಿ ಹಾಗೂ ಸಂಜೆ ಬಾತಿ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮುಖಂಡರು, ಕಾರ್ಯಕರ್ತೆಯರ ಜೊತೆಗೂಡಿ ಮತದಾರರ ಪ್ರತಿ ಮನೆಗಳಿಗೆ ಭೇಟಿ ನೀಡಿ ಮನೆ ಮನೆ ಸಂಪರ್ಕ ಜೊತೆಗೆ ಮತದಾರರ ಮನೆಗಳಲ್ಲಿ ಸಭೆ ನಡೆಸಿ, ಪತಿ ನಾಗರಾಜ್ ಲೋಕಿಕೆರೆ ಅವರನ್ನು ಬೆಂಬಲಿಸುವಂತೆ ಮತಯಾಚಿಸಿದರು.ಈ ವೇಳೆ ನಗರ ಪಾಲಿಕೆ ಸದಸ್ಯರಾದ ಗೌರಮ್ಮ ಗಿರೀಶ್, ವಾರ್ಡ್ ಮುಖಂಡಗಳಾದ ನಲ್ಲಿ ಮಂಜುನಾಥ್, ನಾಗರಾಜ್, ನಂದೀಶ್, ರಾಕೇಶ್, ರಾಮಣ್ಣ, ಶಿವಾನಂದ, ಸುಭಾಷ್, ಹೆಚ್.ಸಿ. ಜಯಮ್ಮ, ಗಾಯತ್ರಿ, ರೇಖಾ ಸುರೇಶ್, ತನು ನಂದೀಶ್, ರಾಜೇಶ್ವರಿ, ಮೇಘನಾ, ದಾಕ್ಷಾಯಿಣಿ, ಮಂಜುಳಾ, ಯಶೋಧ, ಶ್ರೀದೇವಿ, ರಶ್ಮಿ ಪ್ರದೀಪ್, ಪ್ರೀತಿ ಜಗದೀಶ್, ಶ್ವೇತಾ ರಾಘವೇಂದ್ರ ಪಲ್ಗುಣಿ, ಸಾಕಮ್ಮ, ದೇವಕ್ಕ, ಜ್ಯೋತಿ, ಗಾಯತ್ರಿ, ರೇಖಾ ಸುರೇಶ, ಉಷಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಲತಾ ನಾಗರಾಜ್ ಲೋಕಿಕೆರೆ ಅವರಿಗೆ ಸಾಥ್ ನೀಡಿದ್ದರು.