
ದಾವಣಗೆರೆ.ಮೇ.೫: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಬಿರುಸಿನ ಮತ ಪ್ರಚಾರ ನಡೆಸಿದರು. 23ನೇ ವಾರ್ಡ್ ನಲ್ಲಿನ ಮತ ಪ್ರಚಾರವು ವಿನೋಬನಗರ 2ನೇ ಮುಖ್ಯ ರಸ್ತೆಯಲ್ಲಿನ ಶ್ರೀ ವೀರ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ಪ್ರಾರಂಭವಾಯಿತು. ಎಸ್. ನಿಜಲಿಂಗಪ್ಪ ಬಡಾವಣೆ, ಎಸ್. ಎಸ್. ಬಡಾವಣೆಯಲ್ಲಿ ನಾಗರಾಜ್ ಲೋಕಿಕೆರೆ ಅವರು ಮತಯಾಚಿಸಿದರು.ವಾರ್ಡಿನ ಪ್ರಮುಖರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ನಾಗರಾಜ್ ಲೋಕಿಕೆರೆ ಪರ ಮತಯಾಚಿಸಿದರು.