
ಬಳ್ಳಾರಿ, ಏ.14 : ನಗರದ 23ನೇ ವಾರ್ಡಿನ ಡಾ. ಬಿಆರ್ ಅಂಬೇಡ್ಕರ್ ನಗರ, 1 ನೇ ವಾರ್ಡಿನ ಹರಿಶ್ಚಂದ್ರ ನಗರ ಮತ್ತು 36ನೇ ವಾರ್ಡಿನ ಲಾಲ್ ಬಹುದ್ದೂರ್ ಶಾಸ್ತ್ರಿ ನಗರದಲ್ಲಿ
ಡಾ. ಬಿ.ಆರ್. ಅಂಬೇಡ್ಕರ್ ಅವರ 132 ನೇ ಜನ್ಮದಿನಾಚರಣೆಯನ್ನು ಕೊರಲಗುಂದಿ ವಿ. ದೊಡ್ಡಕೇಶವ ರೆಡ್ಡಿ ಅಭಿಮಾನಿ ಬಳಗದಿಂದ ಸಾರ್ವಜನಿಕರಿಗೆ ಸಂವಿಧಾನ ಓದು ಹಾಗೂ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಸುಮಾರು ಐದುನೂರು ಪುಸ್ತಕಗಳನ್ನು ಹಾಗೂ ಸಿಹಿ ವಿತರಿಸುವುದರ ಮೂಲಕ ಆಚರಿಸಲಾಯಿತು.
ಇದಕ್ಕೂ ಮುನ್ನ ನಗರದ ಅಂಬೇಡ್ಕರ್ ಭವನದಲ್ಲಿನ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.
ನೆರೆದಿದ್ದವರಿಗೆ ಪುಸ್ತಕ ಹಾಗೂ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಕೊರಲಗುಂದಿ ಕೇಶವರೆಡ್ಡಿ, ನ್ಯಾಯವಾದಿ ಬಾದಾಮಿ ಶಿವಲಿಂಗನಾಯಕ, ಸಮಾಜ ಸೇವಕ ವಿ.ಬಿ ಮಲ್ಲಪ್ಪ, ಯುವ ಮುಖಂಡ ಜೆ .ವಿ.ಮಂಜುನಾಥ, ಪ್ರದೀಪ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಪ್ರಕಾಶ್ ಗೌಡ, ಬಾಲಾಜಿ, ಗೋವಿಂದ, ಬಸಪ್ಪ, ಲಿಂಗಾರೆಡ್ಡಿ, ಗೋಪಾಲ್, ಮಲ್ಲಿಕಾರ್ಜುನ, ಅಮಿತ್, ಪವನ್, ಕಲಂದರ್, ಲಕ್ಷ್ಮಣ, ರಾಮು ಮುಂತಾದವರು ಇದ್ದರು