ವಿವಿಧ ರಸ್ತೆಗಳ ಅಭಿವೃದ್ಧಿಗೆ
 ನಗರ ಶಾಸಕರಿಂದ ಚಾಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.28: ನಗರದ 35, 22, 21, ಹಾಗೂ 18ನೇ ವಾರ್ಡ್ ಗಳಲ್ಲಿ ಶಾಸಕರ ಅನುದಾನದಡಿ ಇಂದು ಅಂದಾಜು 2.50 ಕೋಟಿ ರೂಪಾಯಿ ವೆಚ್ಚದ  ರಸ್ತೆ ಕಾಮಗಾರಿಗಳಿಗೆ  ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮತ್ತು ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ  ಮಹಾನಗರ ಪಾಲಿಕೆಯ ಸದಸ್ಯರಾದ. ಕೆ. ಹನುಮಂತಪ್ಪ. ಸುರೇಖಾ ಮಲ್ಲನಗೌಡ.  ರಾ. ಬ. ಕೋ. ನಿರ್ದೇಶಕ.  ವೀರಶೇಖರ ರೆಡ್ಡಿ. ನ್ಯಾಯವಾದಿ ಸಿದ್ದಾರೆಡ್ಡಿ, ಮೊದಲಾದವರು ಇದ್ದರು.