ವಿವಿಧ ಮಾದರಿಯ 130 ಮೊಬೈಲ್ ಫೆÇನ್ ವಶ

ಮಂಡ್ಯ.ಮೇ.19:- ಮಂಡ್ಯ ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ತಂತ್ರಾಂಶದ ಸಹಾಯದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಳ್ಳತನ/ಕಾಣೆಯಾಗಿದ್ದ ರೂ.23,00,000/- ಬೆಲೆ ಬಾಳುವ ವಿವಿಧ ಮಾದರಿಯ 130 ಮೊಬೈಲ್ ಫೆÇನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿ?Á?ಠಧಿಕಾರಿ ಎನ್ ಯತೀಶ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಪೆÇಲೀಸ್ ವರಿ?Á?ಠಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಮಾದರಿಯ ಮೊಬೈಲ್ ಪೆÇನ್‍ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.
ಸಾರ್ವಜನಿಕರು ತಮ್ಮ ಮೊಬೈಲ್ ಪೆÇನ್ ಕಳೆದುಹೋದಲ್ಲಿ ಸಿ.ಇ.ಎನ್ ಪೆÇರ್ಟಲ್ ನ್ನು ಬಳಸಿಕೊಂಡು, ನಿಮ್ಮ ಮೊಬೈಲ್ ನ ಐ.ಎಂ.ಎ ನಂಬರ್ ತೆಗೆದುಕೊಂಡು ಸಮೀಪದ ಪೆÇಲೀಸ್ ಠಾಣೆಗೆ ದೂರು ನೀಡಿ, ದೂರಿನ ಪ್ರತಿಯನ್ನು ಪಡೆದು ತಿತಿತಿ.ಛಿeiಡಿ.gov.iಟಿ ನಲ್ಲಿ ಲಾಗಿನ್ ಆಗಿ ದೂರನ್ನು ದಾಖಲಿಸಿ ಎಂದರು.
ಮಂಡ್ಯ ಜಿಲ್ಲೆಯ ಎಲ್ಲಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ/ ಕಾಣೆಯಾಗಿದ್ದ ಮೊಬೈಲ್ ಫೆÇನ್‍ಗಳನ್ನು ಪತ್ತೆ ಮಾಡುವ ಸಂಬಂಧವಾಗಿ ಮಂಡ್ಯ ಜಿಲ್ಲಾ ಅಪರ ಪೆÇಲೀಸ್ ಅಧೀಕ್ಷಕರಾದ ಸಿ.ಇ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸಿ.ಇ.ಎನ್ ಅಪರಾಧ ಪೆÇಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಎನ್. ಜಯಕುಮಾರ್ ನೇತೃತ್ವದಲ್ಲಿ ಪಿ.ಎಸ್.ಐ ರಾಘವೇಂದ್ರ ಎಂ ಕಠಾರಿ, ರಸೂಲಸಾಬ ಎಂ ಗೌಂಡಿ ಹಾಗೂ ಸಿಬ್ಬಂದಿಗಳಾದ ಎ.ಎಂ ರಾಜೇಅರಸ್, ಎಸ್. ಗಿರೀಶ್, ಹೆಚ್.ಆರ್ ಸುಮನ್ ಅವರು ಒಳಗೊಂಡಂತೆ ಅಧಿಕಾರಿಯವರ ತಂಡ ರಚನೆ ಮಾಡಲಾಗಿತ್ತು.
ಮಂಡ್ಯ ಸಿ.ಇ.ಎನ್ ಅಪರಾಧ ಪೆÇಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯವನ್ನು ಮಂಡ್ಯ ಜಿಲ್ಲಾ ಪೆÇಲೀಸ್ ವರಿ?Á?ಠಧಿಕಾರಿಗಳು ಶ್ಲಾಘಿಸಿ ಪ್ರಶಂಸಿರುತ್ತಾರೆ.