ವಿವಿಧ ಮಸೀದಿಗಳಿಗೆ ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದಿಂದ ಹಣ್ಣು ವಿತರಣೆ

ಸಿರವಾರ,ಏ.೧೧- ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಹಬ್ಬದ ಅಂಗವಾಗಿ ಉಪವಾಸ ನಿರತರಿಗೆ ಜೆಡಿಎಸ್ ಅಲ್ಪ ಸಂಖ್ಯಾತರ ಘಟಕ ಹಾಗೂ ಮುಸ್ಲಿಂ ಬಾಂಧವರಿಂದ ಹಣ್ಣುಗಳನ್ನು ನೀಡಲಾಯಿತು.
ಪಟ್ಟಣದ ನೂರಾನಿ ಮಸ್ಜಿದ್, ಫಿರ್ದೋಶಿ ಮಸ್ಜಿದ್, ಮೋದಿನ್ ಮಸ್ಜಿದ್, ಮಹ್ಮದೀಯಾ ಮಸ್ಜಿದ್, ಜಾಮಿಯಾ ಮಸ್ಜಿದ್, ತಕ್ವಾ ಮಸ್ಜಿದ್, ಹಾಗೂ ಬೀಲಾಲ್ ಮಸೀದಿಗಳಿಗೆ ಅಲ್ಪ ಸಂಖ್ಯಾತರ ಘಟಕದ ಅದ್ಯಕ್ಷ ಎಂ.ಡಿ.ವಲಿಸಾಬ್ ನೇತೃತ್ವದಲ್ಲಿ ವಿತರಣೆ ಮಾಡಲಾಯಿತು. ನಂತರ ಮಾತನಾಡಿದ ಅವರು ರಂಜಾನ್ ಹಬ್ಬದ ಅಂಗವಾಗಿ ಅನೇಕ ವರ್ಷಗಳಿಂದ ನಮ್ಮ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಆಗಮಿಸಿ ಉಪವಾಸ ನಿರತರಿಗೆ ಹಣ್ಣುಗಳನ್ನು ವಿತರಣೆ ಮಾಡುತ್ತಿದ್ದರು.
ಆದರೆ ಈ ವರ್ಷ ಚುನಾವಣೆ ವರ್ಷವಾಗಿರುವ ಕಾರಣ ನೀತಿ ಸಂಹಿತೆ ಇರುವುದರಿಂದ ಅವರು ಬರಲು ಸಾಧ್ಯವಾಗಿಲ್ಲ, ಅವರು ನಮ್ಮೊಂದಿಗೆ ಸದಾ ಇರುತ್ತಾರೆ. ಪಟ್ಟಣದ ಅಭಿವೃದ್ಧಿ ಜೊತೆಗೆ ಸಮಾಜದ ಅನೇಕ ಬೇಡಿಕೆಗೆ ಸ್ಪಂದಿಸಿದ್ದಾರೆ. ಮುಂದೇಯೂ ಸಹ ಅವರ ಜೊತೆಗೆ ನಾವು ಇರುತ್ತೆವೆ. ಅವರೊಂದಿಗೆ ನಾವು ಇರೋಣ ಎಂದಿದ್ದಾರೆ.
ಈ ಸಂದರ್ಭದಲ್ಲಿ ಎಂ.ಡಿ.ವಲಿಸಾಬ್, ಸತ್ತರಸಾಬ್, ಇಬ್ರಾಹಿಂ ಎಲ್.ಐ.ಸಿ,ಇಸ್ಮಾಯಿಲ್ ಸಾಬ್, ನಾಸೀರ್ ಸಾಬ್, ಭಡಾಘರ್,ರಫಿಸಾಬ್, ಜೀಲಾನಿ, ಅಜುಮುದ್ದಿನ್, ಮಹಿಬೂಬ್ ಗಲಗ್, ಖಾದರಸಾಬ್ ಸೇರಿದಂತೆ ಇನ್ನಿತರರು ಇದ್ದರು.