ವಿವಿಧ ಮತಗಟ್ಟೆ ಕೇಂದ್ರಕ್ಕೆ ಇ.ಓ ಭೇಟಿ,ಪರಿಶೀಲನೆ

ರಾಯಚೂರು,ಏ.೧೫- ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಆಗಮಿಸುವ ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಮಾಡಲು ಆಗಮಿಸುವರರಿಗೆ ಯಾವುದೇ ರೀತಿಯ ಸಮಸ್ಯೆಗಳು ಕಂಡುಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಮಾನ್ಯ ಸಿರವಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ ರವರು ಸೂಚಿಸಿದರು.
ಅವರಿಂದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ.ಗುಡದಿನ್ನಿ, ಚಾಗಬಾವಿ, ಮಾಡಗಿರಿ, ಕಲ್ಲೂರು, ಅತ್ತನೂರು ಗಣದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಿದ ಮತಗಟ್ಟೆ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಮತಗಟ್ಟೆ ಕೇಂದ್ರಗಳಿಗೆ ಸುಣ್ಣ ಬಣ್ಣ ಹಚ್ಚಬೇಕು. ಬಾಗಿಲು ದುರಸ್ಥಿಗೊಳಿಸಬೇಕೆಂದು ನಿರ್ದೇಶನ ನೀಡಿದರು.
ಕೇಂದ್ರಗಳಿಗೆ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ವಿಕಲಚೇತನರ ರ?ಯಾಂಪ್, ಬಾಗಿಲು, ಕಿಟಕಿ, ಫ್ಯಾನ್, ವೀಲ್ ಚೇರ್ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಮತದಾನಕ್ಕಿಂತ ಮುಂಚಿತವಾಗಿ ಕೇಂದ್ರಗಳಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದರು.ಶೌಚಾಲಯಗಳಿಗೆ ಬಾಗಿಲು, ನೀರಿನ ವ್ಯವಸ್ಥೆ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಪಿಡಿಓ, ಕಾರ್ಯದರ್ಶಿಯವರು ಇದ್ದರು.