
ಸಿರವಾರ.ಜ೧೦- ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಮತಗಟ್ಟೆಗಳಿಗೆ ಸಿರವಾರ ತಹಸೀಲ್ದಾರ ವಿಜಯೇಂದ್ರಹುಲಿನಾಯಕ ಬೇಟ್ಟಿ ನೀಡಿ ವಿಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು ಸಿರವಾರ, ಅತ್ತನೂರು ಗ್ರಾ.ಪಂ, ಗಣದಿನ್ನಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಮತಗಟ್ಟೆಗಳಿಗೆ ಬೇಟಿ ನೀಡಲಾಗಿದೆ. ಕೊಣೆ, ಶೌಚಾಲಯ, ವಿದ್ಯುತ್ ಸೇರಿ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ವಿಕ್ಷಣೆ ಮಾಡಲಾಗಿದೆ, ಹಾಳಾದಲಿ ಪಂಚಾಯತಿ ಯವರಿಗೆ ತಿಳಿಸಿ ದುರಸ್ಥಿಗೊಳಿಸಲಾಗುವುದು. ಚುನಾವಣೆ ಯಾವಾಗ ಘೋಷಣೆಯಾದರೂ ನಾವು ಸಿದ್ದರಿರಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶ ಮೆರೆಗೆ ವಿಕ್ಷಣೆ ಮಾಡಲಾಗಿದೆ ಎಂದರು. ಉಪತಹಸಿಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಿನಾಥ, ವಿಎ ವಿಲ್ಸನ್, ಬಿಎಲ್ ಓ ಗಳು ಇದರು