ವಿವಿಧ ಮಠಗಳಲ್ಲಿ ಶಿವಾನುಭವ ಚಿಂತನೆ

ಕಲಬುರಗಿ,ಮೇ 15: ಕಲಬುರಗಿ,ಮತ್ತು ಯಾದಗಿರಿ ಜಿಲ್ಲೆಯ ವಿವಿಧ ಮಠಗಳಲ್ಲಿ ಬಾದಮಿ ಅಮವಾಸ್ಯೆ ಪ್ರಯುಕ್ತ ಮೇ 19 ರಂದು ಶಿವಾನುಭವ ಚಿಂತನೆ ನಡೆಯಲಿದೆ.
ಯಾದಗಿರಿ ಜಿಲ್ಲೆ ಅಬ್ಬೆತುಮಕೂರಿನ ವಿಶ್ವರಾಧ್ಯ ಮಠದಲ್ಲಿ 456 ನೇಶಿವಾನುಭವ ಚಿಂತನೆಯು ಡಾ.ಗಂಗಾಧರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ರಾತ್ರಿ 8.30 ಕ್ಕೆ ನಡೆಯಲಿದೆ .ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕ ವೀರೇಶ್ವರ ಹಿರೇಮಠದಲ್ಲಿ ಡಾ.ರೇವಣಸಿದ್ಧ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ 291 ನೇ ಶಿವಾನುಭವ ಚಿಂತನೆ ರಾತ್ರಿ 8 ಕ್ಕೆ ನಡೆಯಲಿದೆ.ಜೇವರಗಿ ತಾಲೂಕಿನ ಶಖಾಪುರ ವಿಶ್ವರಾಧ್ಯ ತಪೋವನದಲ್ಲಿ ರಾತ್ರಿ 8 ಗಂಟೆಗೆ ನಡೆಯುವ 346 ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಸಿದ್ಧರಾಮಶಿವಾಚಾರ್ಯರು ವಹಿಸುವರು.ಮೇ 24 ರಂದು ಶಹಾಪುರ ತಾಲೂಕಿನ ಅಪ್ಪನ ಶಾಖಾಪುರದ ಮಠದಲ್ಲಿ ನಡೆಯುವ 273 ನೇ ಶಿವಾನುಭವ ಚಿಂತನೆ ಅಧ್ಯಕ್ಷತೆಯನ್ನು ಡಾ.ಗಂಗಾಧರ ಮಹಾಸ್ವಾಮಿಗಳಉ ವಹಿಸುವರು ಎಂದು ವಿಶ್ವರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಮತ್ತು ವಕ್ತಾರ ಬಸವರಾಜ ಶೀಲವಂತ ಅಂಬಲಗಿ ತಿಳಿಸಿದ್ದಾರೆ.