ವಿವಿಧ ಬೇಡಿಕೆ ಈಡೇರಿಸಲು ಕೆಡಿಎಸ್‌ಎಸ್ ಮನವಿ

ಗಬ್ಬೂರು.ಏ.೨೯-ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಲವು ಗ್ರಾಮಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಬುರ್ರಪ್ಪ ಮರೆಡ್ಡಿ ಅವರ ನೇತೃತ್ವದಲ್ಲಿ ದೇವದುರ್ಗ ತಾಲೂಕು ತಹಶಿಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ದೇವದುರ್ಗ ತಾಲೂಕಿಗೆ ಸಂಬಂಧಿಸಿದಂತೆ ಕೆಲವು ಗ್ರಾಮದ ಸಾರ್ವಜನಿಕರು ನೆರೆಹಾವಳಿಗೆ ತುತ್ತಾದವರಿಗೆ ಪರಿಹಾರ,ಬೆಳೆಹಾನಿ ನಷ್ಟ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಈಡೇರಿಸಬೇಕಾದ ಆಡಳಿತ ಯಂತ್ರ ರಾಜಕೀಯ ಕೈಗೊಂಬೆಯಾಗಿದೆ ಅಲ್ಲದೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಕಾರಣದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತದೆ ಆದ್ದರಿಂದ ಸಾರ್ವಜನಿಕರ ಅಭಿವೃದ್ಧಿಗೆ ಸಹಕಾರ ಮಾಡುವುದರಲ್ಲಿ ಹಿತಾಸಕ್ತಿಯ ವಿಷಯಗಳ ಬಗ್ಗೆ ಮಾಹಿತಿ ಪಡೆದು ಸಾರ್ವಜನಿಕರ ಬೇಡಿಕೆಗಳಾದ ಆಲ್ಕೋಡ,ಗೂಗಲ್, ಶಾವಂತಗೇರಾ ಹಾಗೂ ಗಬ್ಬೂರು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ೨೦೧೦-೧೧ ರಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಪಾವತಿಯಾಗದಿರುವುದು.
ಗಬ್ಬೂರು ಗ್ರಾಮದ ೧ ಹಾಗೂ ೫ ನೇ ವಾರ್ಡ್‌ಗಳಿಗೆ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪಿಸುವುದು.
ಗಬ್ಬೂರು ಗ್ರಾಮದ ಮದರಕಲ್ ಮಾರ್ಗ ರಸ್ತೆಯ ಮೇಲೆ ಹರಿಯುವ ಚರಂಡಿ ನೀರು ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡುವುದು.
ಶಾವಂತಗೇರಾ ಗ್ರಾಮದ ಸರ್ವೇ ನಂಬರ೩// ವಿಸ್ತೀರ್ಣದ ೦೩ ಎಕರೆ ೨೭ ಗುಂಟೆ ಜಮೀನಿನಲ್ಲಿ ಪ.ಜಾ,ಪ.ಪಂ ಹಾಗೂ ವಸತಿ ರಹಿತರಿಗೆ ಆಶ್ರಯ ಕಾಲೋನಿ ನಿರ್ಮಾಣ ಮಾಡೋದು.
ಅಲ್ಲದೇ ಸರ್ವೇ ನಂಬರ ೨// ವಿಸ್ತೀರ್ಣದ ೦೧ ಎಕರೆ ೦೮ ಗುಂಟೆ ಜಮೀನನ್ನು ಸ್ಮಶಾನ ಮಂಜೂರು ಮಾಡುವುದು.
ಸುಂಕೇಶ್ವರಹಾಳ ದಿಂದ ಶಾವಂತಗೇರಾ ಗ್ರಾಮದ ವರೆಗೆ ರಸ್ತೆ ದುರಸ್ತಿ ಮಾಡುವುದು.
ಮಂದಕಲ್ ಗ್ರಾಮದ ಸರ್ವೇ ನಂಬರ ೨೧೭ ರ ೨೭ ಎಕರೆ ೩೫ ಗುಂಟೆ ಜಮೀನನ್ನು ಭೂರಹಿತರಿಗೆ ಹಂಚಿಕೆ ಮಾಡುವುದು.
ಗೂಗಲ್, ಶಾವಂತಗೇರಾ, ಬಾಗೂರು ಗ್ರಾಮದಲ್ಲಿ ಪ.ಪಂ ಜನಾಂಗಕ್ಕೆ ಸ್ಮಶಾನ ಮಂಜೂರು ಮಾಡುವುದು.
ಗೂಗಲ್ ಗ್ರಾಮದ ಗಾಗಲ್ ಸೀಮಾಂತರದ ಸರ್ವೇ ನಂಬರ ೦೭ ರ ೦೨ ಎಕರೆ ೧೨ ಗುಂಟೆಯ ಜಮೀನು ನೆರೆಹಾವಳಿಗೆ ತುತ್ತಾಗಿ ವರ್ಷಗಳೇ ಕಳೆದರೂ ಸರಕಾರದಿಂದ ಪರಹಾರ ಬರದೇ ಇರುವುದು.
ಅಲ್ಲದೇ ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡ ಫಲಾಭವಿಗಳಿಗೆ ಈ ಕೂಡಲೇ ಪರಿಹಾರ ಒದಗಿಸುವುದು.
ಚಿಂಚೋಡಿ ಗ್ರಾಮದ ಸಿದ್ದಪ್ಪನ ಮನೆಯಿಂದ ಹುಸೇನ್ ಸಾಬ ಮನೆಯ ವರೆಗೆ ಚರಂಡಿ ನಿರ್ಮಾಣ ಹಾಗೂ ಎಸ್.ಸಿ ಕಾಲೋನಿಯ ಹುಚ್ಚಪ್ಪನ ಮನೆಯಿಂದ ಯಲ್ಲಪ್ಪನ ಮನೆ ಮುಂದೆ ಇರುವ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವುದು.
ಬಾಗೂರು ಗ್ರಾಮದ ದುರ್ಗಾದೇವಿ ದೇವಾಲಯದ ಜಾಗದಲ್ಲಿ ಮದ್ಯಪಾನ ಮಾರಾಟ ಮಾಡುವುದನ್ನು ರದ್ದು ಪಡಿಸುವುದು.
ಅಲ್ಲದೆ ಇದೇ ಗ್ರಾಮದಿಂದ ಕೃಷ್ಣ ನದಿಯವರೆಗೆ ಸಿ.ಸಿ.ರಸ್ತೆ ನಿರ್ಮಿಸುವುದು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸುವುದು
ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಆದಷ್ಟೂ ಬೇಗನೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾದ ಬುರ್ರಪ್ಪ ಮರೆಡ್ಡಿ ಅವರ ನೇತೃತ್ವದಲ್ಲಿ ದೇವದುರ್ಗ ತಾಲ್ಲೂಕಿನ ತಹಶಿಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವರಾಜ ಘಂಟಿ ಜಿಲ್ಲಾ ಡಿ.ಎಸ್.ಎಸ್.ಸಂ ಸಂಚಾಲಕರು ರಾಯಚೂರು, ಹನುಮಂತಪ್ಪ ಮನ್ನಾಪೂರ್ ಜಿಲ್ಲಾಧ್ಯಕ್ಷರು ಎಮ್.ಆರ್.ಹೆಚ್.ಎಸ್ ರಾಯಚೂರು,ಬುರ್ರಪ್ಪ ಮರೆಡ್ಡಿ ಡಿ.ಎಸ್.ಎಸ್. ತಾಲ್ಲೂಕು ಸಂಚಾಲಕರು ದೇವದುರ್ಗ, ತಾ.ಸಂ.ಸಂ.ದೇ ರಾದ ತಿಪ್ಪಣ್ಣ ಗರಡಿ ಆಲ್ಕೋಡ, ರಾಜು ಬಾಗೂರು ದೊಡ್ಡಮನೆ, ಡಿ.ಹನುಮಂತಪ್ಪ ಮಲ್ದಕಲ್,ಅನೀಲ ಬಂಡಾರಿ,ರಮೇಶ್ ಕಾರ್ಪೆಂಟರ್ ದೇವದುರ್ಗ, ಶರಣಪ್ಪ ನಗರಗುಂಡ, ಶಂಕರಪ್ಪ ಗೂಗಲ್ ಕೊಪ್ಪರ ಹೋಬಳಿ ಸಂಚಾಲಕ, ಮಲ್ಲಪ್ಪ ಇಟಗಿ, ಯಲ್ಲಪ್ಪ ಇಟಗಿ ಕೊಪ್ಪರ ಹೋಬಳಿ ಸಂಚಾಲಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.