ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ವಿಜಯಪುರ, ಆ.1-ಕೇಂದ್ರ ಸರ್ಕಾರದ ವಚನ ಭ್ರಷ್ಟ ನೀತಿಯನ್ನು ಪ್ರತಿಭಟಿಸಿ ಸಂಯುಕ್ತ ಹೋರಾಟ – ಕರ್ನಾಟಕ ವಿಜಯಪುರ ಜಿಲ್ಲಾ ಸಮಿತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ರೈತರ ಬೆಳೆದ ಬೆಲೆಗೆ ಭ್ರಷ್ಟ ಬೆಂಬಲ ಬೆಲೆ ನಿಗದಿಸಿ ಕನೂನು ಜಾರಿಗೊಳಿಸಬೇಕು. ರೈತರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಯನ್ನು ವಾಪಸ್ಸು ಪಡೆಯಬೇಕು. ಲಕ್ಕೀಂಪೂರ-ಖೇರಿಯಲ್ಲಿ ರೈತರ ಮೇಲೆ ನಡೆದ ಹತ್ಯಾಖಂಡ ಪ್ರಮುಖ ಆರೋಪಿ ಅಜಯಮಿಶ್ರಾನನ್ನು ಕೇಂದ್ರ ಸಚಿವ ಸಂಪುಟದಿಂದ ವಜಾ ಗೊಳಿಸಬೇಕು.
ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ಉಳಿಕೆ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ಡಿಸೆಂಬರ್ 2021 ರಂದು ಲಿಖಿತ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದ ಕೇಂದ್ರ ಸರ್ಕಾರ ಅದರ ವಿರುದ್ಧ ನಡೆದುಕೊಳ್ಳುತ್ತಿದೆ, ರೈತ ಸಮುದಾಯಕ್ಕೆ ದ್ರೋಹವೆಸಗಿದ ಬಿಜೆಪಿ ಸರ್ಕಾರದ ನೀತಿಯನ್ನು ತೀವೃವಾಗಿ ಖಂಡಿಸುತ್ತೇವೆ. ದೆಹಲಿ ಹೋರಾಟದಲ್ಲಿ ಮೃತಪಟ್ಟಿರುವ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸಬೇಕು. ಸಂವಿಧಾನ ಮೌಲ್ಯಗಳನ್ನು ಕಾಪಾಡಲು ಶ್ರಮಿಸುವದಾಗಿ ರಾಜ್ಯದ ರೈತರ ಬದುಕಿಗೆ ಕಂಟಕವಾಗಿರುವ ರಾಜ್ಯ ಕೃಷಿಕಾಯ್ದೆಯನ್ನು ಕೂಡಲೇ ರದ್ದು ಮಾಡಬೇಕು. ರೈತ ವಿರೋಧಿ ಭೂಸುಧಾರಣಾ ತಿದ್ದು ಪಡೆ ಕಾಯ್ದೆ ಹಿಂಪಡೆಯಬೇಕು. ಅಗತ್ಯ ಆಹಾರ ಪದಾರ್ಥಗಳ ಮೇಲೆ 5% ಜಿ.ಎಸ್.ಟಿ ಹಾಕಿರುವುದನ್ನು ಕೈ ಬಿಡಬೇಕು. ಪೆಟ್ರೋಲ್ ಮತ್ತು ದಿನಬಳಕೆ ಅಗತ್ಯವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಜನ ವಿರೋಧಿ, ರೈತ ವಿರೋಧಿ, ದೇಶ ವಿರೋಧಿ, ವಿದ್ಯುತ್ ಕಾಯ್ದೆ 2022 ರದ್ದು ಪಡಿಸಬೇಕು. ರೈತ ವಿರೋಧೀ ಜಾನವಾರು ಹತ್ಯ ಕಾಯ್ದೆ ರದ್ದು ಪಡಿಸಬೇಕು. ಸ್ಥಳೀಯ ಬೇಡಿಕೆಯಾದ ಬಗರ್‍ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ಸಿಂದಗಿ ತಾಲೂಕಿನ ಹುಣಶ್ಯಾಳ ಮತ್ತು ಕುದಗುಂಡ ಕೆರೆಗಳಿಗೆ ನೀರು ತುಂಬುವ ಯೋಜನೆ ಮಂಜೂರಾಗಿದ್ದು, ಕೆಲಸ ತೀವ್ರವಾಗಿ ಮುಗಿಸಬೇಕು. ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಯ ಕೊನೆಯ ಹಂತದವರೆಗೂ ನೀರು ಒದಗಿಸಬೇಕು ಎಂದು ಮುಂತಾದ ಬೇಡಿಕೆಗಳಿಗಾಗಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಶಿ ಕಲಾದಗಿ, ಆರ್.ಕೆ.ಎಸ್. ರಾಜ್ಯ ಉಪಾಧ್ಯಕ್ಷ ಭೀ.ಭಗವಾನ ರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಜನವಾದಿ ಮಹಿಳಾ ಸಂಘದ ಸುರೇಖಾ ರಜಪೂತ, ಸಾಹೇಬ್ಬಿ ಶೇಖ, ಎ.ಐ.ಡಿ.ಎಸ್.ಓ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ಸಿಐಟಿಯು ಜಿಲ್ಲಾ ಕಾರ್ಯದರ್ಶೀ ಲಕ್ಷ್ಮಣ ಹಂದ್ರಾಳ, ಸ್ಲಂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಕ್ರಮ ಮಾಶ್ಯಾಳಕರ, ದಲಿತ ವಿದ್ಯಾರ್ಥಿ ಒಕ್ಕೂಟದ ಮುಖಂಡ ಶ್ರೀನಾಥ ಪೂಜಾರಿ,ಅಕ್ಷಯ ಕುಮಾರ, ಆಟೋ ರಿಕ್ಷಾ ಯೂನಿಯನ್ ಮುಖಂಡ ರಾಜು ರಣದೇವಿ ಮುಂತಾದ ಪ್ರಮುಖರು ಹೋರಾಟದಲ್ಲಿ ಇದ್ದರು.