ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಧರಣಿ

ರಾಯಚೂರು,ಜು.೧೦-
ರಾಯಚೂರು ಜಿಲ್ಲೆಯನ್ನು ಬರಗಾಲ ಜಿಲ್ಲೆಯಂದು ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಧರಣಿಯನ್ನು ನಡೆಸಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸವನ್ನು ಎಲ್ಲಾ ತಾಲೂಕಗಳಲ್ಲಿ ವ್ಯಾಪಕವಾಗಿ ತೆಗೆದುಕೊಳ್ಳಬೇಕು. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸ ೨೦೦ ದಿನಗಳಿಗೆ ಹೆಚ್ಚಿಸಿ ಕೂಅಕಾರರಿಗೆ ರೂ.೬೦೦ ಕೂಲಿಯನ್ನು ಕೊಡಬೇಕು. ಕಾಯಕ ಬಂಧುಗಳು ಅಥವಾ ಕೂಲಿಕಾರರು ಫಾರಂ ನಂ. ೬ ಕೊಡಲು ಬಂದಾಗ ಪಿ.ಡಿ.ಓ. ಗಳು ಪಂಚಾಯತಿ ಕೇಂದ್ರದಲ್ಲಿದ್ದು, ಅರ್ಜಿ ಸ್ವೀಕರಿಸಿದ ಪ್ರತಿಯನ್ನು ಸಹಿ ಮೊಹರಿನೊಂದಿಗೆ ಕೊಡಬೇಕು.ಕಾಯಕ ಬಂಧುಗಳಿಗೆ ಗುರಿತಿನ ಚೀಟಿ ಮತ್ತು ಪ್ರೋತ್ಸಾಹ ಧನ ಕೊಡಬೇಕು ಎಂದು ಒತ್ತಾಯಿಸಿದರು.
ಕಾಯಕ ಬಂಧುಗಳು ಮತ್ತು ಕೂಲಿಕಾರರನ್ನು ಪಂಚಾಯತಿಯಲ್ಲಿ ದಾಖಲು ಮಾಡಿ ಕಂಪ್ಯೂಟರ್ ತಂತ್ರಾಂಶದಲ್ಲಿ ಕಾಯಕ ಬಂಧುಗಳ ಹೆಸರುಗಳನ್ನು ನಮುದಿಸಬೇಕು.
ಕ್ರಿಯಾಯೋಜನೆ ಮಾನವದಿನಗಳ ಅಂದಾಜು ವೆಚ್ಚದ ಪ್ರತಿಯನ್ನು ಕೊಡಬೇಕು. ಕಡಿಮೆ ಕೂಲಿ ಹಾಕುವುದನ್ನು ತಕ್ಷಣ ನಿಲ್ಲಿಸಬೇಕು ಮತ್ತು ಕೇಂದ್ರ ಸರ್ಕಾರ ನಿಗದಿಗೊಳಿಸಿದ ಕೂಲಿ ಹಣ ರೂ.೧೬ ಕೊಡಲೇ ಬೇಕು,ಕೂಲಿಕಾರರ ಸ್ಥಳದಲ್ಲಿ ಕುಡಿಯುವ ನೀರು, ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು.೬೦ ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಕೆಲಸದ ಪ್ರಮಾಣವನ್ನು ನಿಗದಿಗೊಳಸಬೇಕು ಎಂದು ಆಗ್ರಹಿಸಿದರು.
ಕಾಯಕ ಬಂಧುಗಳಿಗೆ ಮತ್ತು ಕೂಲಿಕಾರರಿಗೆ ತರಬೇತಿ ಶಿಬಿರ ಏರ್ಪಡಿಸಬೇಕು. ಈ ಕಾರ್ಯಕ್ರಮದಲ್ಲಿ ನಮ್ಮ ಸಂಘಟನೆಯ ಸಹಾಯ ಪಡೆದುಕೊಳ್ಳಬೇಕು.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೆಲಸದಲ್ಲಿ ಬಳಸುವ ಹಾರಿ, ಗುದ್ದಲಿ, ಸಲಗೆ, ಪಿಕಾಸಿ, ಪುಟ್ಟಿ ಮುಂತಾದ ಸಲಕರಣಿಗಳು ಪಂಚಾಯತಿಯಿಂದಲೇ ಒದಗಿಸಬೇಕು.ಗುಂಪುಗಳ ರಚನೆ, ಕಾಯಕ ಬಂಧುಗಳ ಆಯ್ಕೆ, ಸರ್ವ ಸದಸ್ಯರ ಸಭೆಯಲ್ಲಿ ಆಗಿರುತ್ತದೆ. ಗುಂಪುಗಳನ್ನು ಹೊಡೆಯುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಗುಂಪುಗಳನ್ನು ಮತ್ತು ಅದರಲ್ಲಿರುವ ಕೂಲಿಕಾರರನ್ನು ರಜಿಸ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕರಿಯಪ್ಪ ಅಚ್ಚೋಳ್ಳು, ಸಂಗಮೇಶ ಮೂಲೆಮನಿ, ಬಿ.ಲಿಂಗಪ್ಪ, ಲಿಂಗಣ್ಣ ಮೊಕಾಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.