ವಿವಿಧ ಬೇಡಿಕೆ ಈಡೇರಿಕೆಗೆ ಸಿ.ಪಿ.ಐ(ಎಂ )ಒತ್ತಾಯ

ರಾಯಚೂರು, ಮೇ.೨೬- ಕೋರೊನ ಕಟ್ಟಿ ಹಾಕುವ ತನಕ ಎಲ್ಲಾ ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿ.ಪಿ.ಐ(ಎಂ ) ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಳುವವರ ಕೋರೊನ ತಂದವರೂ ನೀವೆ ಲಕ್ಷಾಂತರ ಜನರನ್ನು ಕೊಂದವರೂ ನೀವೆ ಆದ್ದರಿಂದ ಈ ನಿಮ್ಮ ಕಪಟ ಪ್ಯಾಕೇಜ್ ಹಿಂಪಡೆದು ಎಲ್ಲಾ ಜನರಿಗೆ ಜೀವನದ ಖಾತ್ರಿ ಕೊಡಬೇಕು. ಕೋರೊನ ಕಟ್ಟಿ ಹಾಕುವ ತನಕ ಎಲ್ಲಾ ಮಂದಿರ,ಮಸೀದಿ, ಚರ್ಚ್‌ಗಳನ್ನು ಕೋರೊನ ಕೇರ್ ಸೆಂಟರ್‌ಗಳನ್ನಾಗಿ ಮಾಡಬೇಕು.ಕೋರೊನ ಕಟ್ಟಿ ಹಾಕುವ ತನಕ ಪ್ರತಿಯೊಂದು ಬಡ ಕುಟುಂಬಕ್ಕೆ ತಿಂಗಳಿಗೆ ೧೦ ಸಾವಿರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ಎಲ್ಲಾ ರೈತಕೂಲಿಗಳಿಗೆ ಪ್ರತಿ ತಿಂಗಳು ಆಹಾರ ಪದಾರ್ಥ ಹಾಗೂ ೫೦೦೦ ಕೈ ಖರ್ಚು ಕೊಡಬೇಕು.ಎಲ್ಲಾ ಕಾರ್ಮಿಕ ನೌಕರರಿಗೆ ಸಂಪೂರ್ಣ ಸಂಬಳ ಕೊಡಬೇಕು.
ಬಿಪಿಎಲ್ ಟುಂಬಗಳಿಗೆ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿ.ಅಮರೇಶ್, ಬಿ.ರುದ್ರಪ್ಪ,ರವಿ ದಾದಸ್,ಸೇರಿದಂತೆ ಇತರರು ಇದ್ದರು.