ವಿವಿಧ ಬೇಡಿಕೆ ಈಡೇರಿಕೆಗೆ ಬೀದಿಬದಿ ವ್ಯಾಪಾರಿಗಳ ಆಗ್ರಹ

ಭಾಲ್ಕಿ :ನ.18: ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಳಿಗೆ ನಿರ್ಮಾಣ ಸೇರಿ
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಬೀದಿಬದಿ ವ್ಯಾಪಾರಿಗಳ
ಸಂಘಟನೆ ಒತ್ತಾಯ ಮಾಡಿದೆ.
ಈ ಕುರಿತು ಈಚೆಗೆ ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ
ರಾಜ್ಯಾಧ್ಯಕ್ಷ ಸಿ.ಇ.ರಂಗಸ್ವಾಮಿ ಸಮ್ಮುಖದಲ್ಲಿ ಜಿಲ್ಲಾ ಅಧ್ಯಕ್ಷ ದಿಲೀಪ
ಜೋಳದಾಪಕೆ ಅವರು ಐಎಎಸ್ ಅಭಿಯಾನ ವಲಯ ನಿರ್ದೇಶಕಿ
ಮಂಜುಶ್ರೀ ಅವರಿಗೆ ಮನವಿ ಸಲ್ಲಿಸಿತು.
ರಸ್ತೆ ಬದಿಯಲ್ಲಿ ರಾತ್ರಿ ಸಮಯದಲ್ಲಿ ಕೆಲಸ ನಿರ್ವಹಿಸಲು ವಿದ್ಯುತ್
ದೀಪ ನೀಡುವುದು, ವಸತಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ
ಮನೆ ನೀಡುವುದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸದಸ್ಯರ
ಸಭೆ ನಡೆಸುವುದು, ಎಲ್ಲ ವ್ಯಾಪಾರಿಗಳಿಗೆ ಬ್ಯಾಂಕ್ ನಿಂದ ಸಾಲ
ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ
ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ರಾಮಯ್ಯ ಬಾಬಯ್ಯ ಸ್ವಾಮಿ,
ಅಬ್ದುಲ್, ಎ.ಡಿ.ಮಹೇಬೂಬ್, ಸಯ್ಯದ ಖಾಜಾ, ಮಹಾದೇವ
ಶಿವರಾಜ, ದೊಡ್ಡಣ ಬಿಕೆ, ಪ್ರೇಮಾ, ಅನ್ವರ್ ಬಾಬಾಸಾಬ್,
ಕೇಶವ ಮೂರ್ತಿ, ಎಸ್ ಭಕ್ತವತ್ಸಲ, ಮನಿಲಕ್ಷ್ಮಿ ಆರ್, ಬಾಶಾಸಾಬ
ಕರ್ನಾಬಿ, ಮಹ್ಮದ ಈಸ್ಮಾಯಿಲ್ ಸಾಬ್, ಕೃಷ್ಣ ಬಿ, ಅನಿಶಾ, ಕೆ.ಆರ್.
ಜಗದೀಶ್,ಕೆ.ಸುನಿಲಸಿಂಗ್, ಶಶಿಕುಮಾರ ಎಚ್.ಎಸ್, ಮಹ್ಮದ್ ಸಿದ್ದಿಕ್
ಇದ್ದರು.