ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ರಾಯಚೂರು, ಜೂ.೧೧- ಒಂದನೇ ಅಲೆಯಲ್ಲಿ ಕರೋನಾ ಕೆಲಸದಲ್ಲಿ ನಿಧನರಾದ ೨೫ ಅಂಗನವಾಡಿ ನೌಕರರಿಗೆ ೩೦ ಲಕ್ಷ ರೂ . ಪರಿಹಾರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು ಸಂಘದ ಮುಖಂಡರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
೨ ನೇ ಅಲೆಯಲ್ಲಿ ಕರೋನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡುವ ಎಲ್ಲರಿಗೂ ಕರೋನಾ ವಾರಿಯಸ್ ಎಂದು ನೇಮಕ ಮಾಡಿರುವ ವ್ಯಯಕ್ತಿಕ ನೇಮಕ ಪತ್ರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನೀಡಲು ನಗರ ಸಭೆ ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ನೌಕರರ ಜೀವನ ಭದ್ರತೆಗೆ ಮುಂದಾಗಬೇಕು. ಆಹಾರ ಧಾನ್ಯಗಳನ್ನು ಹಂಚುವಾಗ ಪ್ರತಿ ಬಾನುಭವಿಗೆ ಪ್ಯಾಕೆಟ್ ರೂಪದಲ್ಲಿ ಕೊಡಬೇಕು.ಆಹಾರ ಧಾನ್ಯಗಳ ಸಂಚಿಕೆಗೆ ವಿಶೇಷ ಟಿ.ಎ. ಕೊಡಬೇಕು . ಮಾಸ್ ಗೆ ಮತ್ತು ಕ್ಯಾನಿಟೈಗರ್ ಮತ್ತು ಮುಕುಗವೆಸು , ಗೆಲ್ಗೆ ಕೊಡಬೇಕು.ಅನುಕಂಪದ ಆಧಾರದಲ್ಲಿ ಕೆಲಸದಲ್ಲಿದ್ದು ನಿಧನರಾದ ಅಂಗನವಾಡಿ ನೌಕರರ ಕುಟುಂಬಗಳಿಗೆ ಕೊಡುವ ಕೆಲಸವನ್ನು ಕರೋನಾ ಸಂದರ್ಭದಲ್ಲಿ ನಿಧನರಾದವರ ಕುಟುಂಬದವರಿಗೆ ಕಾರ್ಯಕರ್ತೆ ಸಹಾಯಕಿಯ ಕೆಲಸ ಕೊಡಲು ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಕೆಲಸ ನೀಡಬೇಕೆಂದು ಆದೇಶ ತಿದ್ದುಪಡಿ ಮಾಡಬೇಕು.ಕರೋನಾ ಸಂದರ್ಭದ ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಉಳಿದ ಕೆಲಸಗಳನ್ನು ಮುಂದೂಡಬೇಕು. ಈಗ ರದ್ದು ಪಡಿಸಿರುವ ಬೇಸಿಗೆ ರಜೆಯನ್ನು ಮಳೆಗಾಲದಲ್ಲಿ ಕೊಡಬೇಕು ಅಥವಾ ೧೫ ದಿನಗಳ ಹೆಚ್ಚುವರಿ ವೇತನ ಕೊಡಬೇಕು.ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.ಜಿಲ್ಲೆಯಲ್ಲಿ ೧೮-೧೯ ಸಾಲಿನಿಂದ ಇಲ್ಲಿಯವರೆಗೆ ೫೨ ಜನ ನೌಕರರರು ನಿವೃತ್ತಿಯಾಗಿದ್ದು , ಇದುವರೆಗೆ ಇಡಿಗಂಟು ಬಿಡುಗಡೆಯಾಗಿರುವುದಿಲ್ಲ . ಕೂಡಲೇ ಹಣ ಬಿಡುಗಡೆ ಮಾಡಬೇಕು ಮತ್ತು ೨೯ ಜನ ನೌಕರರ ಮರಣ ಪರಿಹಾರ ಹಣ ಹಾಗೂ ೩೦ ಜನ ಸ್ವಯಂ ನಿವೃತ್ತಿ ಹೊಂದಿದವರಿಗೂ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್ ಪದ್ಮಾ ,ರಂಗಮ್ಮ, ಕೆ. ಜಿ ವೀರೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.