ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

ರಾಯಚೂರು,ಸೆ.೨೪-ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿರಿಗೆ ಮತ್ತು ಬಿಸಿಯೂಟ ನೌಕರರಿಗೆ ಕಾಲಮಿತಿಯೊಳಗೆ ಉಚಿತವಾಗಿ ವ್ಯಾಕ್ಸಿನೇಷನ್ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ,ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಮುಂಚೂಣಿಯಲ್ಲಿರುವ ಅಂಗನವಾಡಿ , ಬಿಸಿಯೂಟ ಮತ್ತು ಆಶಾ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು.ಕೊವಿಡ್ ೧೯ ರ ಟೆಸ್ಟ್ ಕಡ್ಡಾಯವಾಗಿ ಮಾಡಿಸಿ ಸೊಂಕಿನಿಂದ ರಕ್ಷಿಸಬೇಕು.ಜೆಡಿಪಿಯ ಶೇ .೬ ರಷ್ಟು ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಮೂಲಭೂತ ಸೌಕರ್ಯಗಳಾದ ಆಮ್ಲಜನಕ ಮೊದಲಾದವುಗಳನ್ನು ಒದಗಿಸಬೇಕು. ಹೆಚ್ಚುವರಿಯಾಗಿ ಮಾಸಿಕ ರೂ . ೧೦ ಸಾವಿರ ಕೋವಿಡ್ -೧೯ ರ ಭತ್ಯೆ ನೀಡಬೇಕು. ಸೇವೆಯಲ್ಲಿದ್ದಾಗ ಕೋವಿಡ್ -೧೯ ರ ಸೋಂಕಿನಿಂದ ಪೀಡಿತರಾದವರಿಗೆಲ್ಲಾ ಕನಿಷ್ಠ ೧೦ ಲಕ್ಷ ರೂ.ಗಳ ಪರಿಹಾರ ನೀಡಬೇಕು. ಕಾರ್ಮಿಕ ವಿರೋಧಿ ಸಂಹಿತೆಗಳನ್ನು ವಾಪಸ್ಸು ಪಡೆಯಬೇಕು.ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕು.ಕೇಂದ್ರ ಯೋಜನೆ ಸ್ಕಿಮು ನೌಕರರನ್ನು ಖಾಯಂ ಗೊಳಿಸಬೇಕು. ಬಜೆಟ್‌ನಲ್ಲಿ ಹೆಚ್ಚಳ ಅನುದಾನ ನೀಡಬೇಕು. ಇಂಡಿಯನ್ ಲೇಬರ್ ಕಾನಪರೆನ್ಸ್ನ ೪೫ ನೇ ಹಾಗೂ ೪೬ ನೇ ಅಧಿವೇಶನದ ಶಿಫಾರಸ್ಸಿನಂತೆ ಸ್ಕೀಮು ಯೋಜನೆಗಳ ಕೆಲಸಗಾರರನ್ನು ಕಾರ್ಮಿಕ ರಂದು ಪರಿಗಣಿಸಿ ,ರೂ ೨೧ ಸಾವಿರ ಮಾಸಿಕ ಕನಿಷ್ಟ ವೇತನ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್.ಪದ್ಮ,ಈರಮ್ಮ,ನಾಗಮ್ಮ,ಪಾರ್ವತಿ,ಸಿ.ಮಹೇಶ್, ಡಿ.ಎಸ್.ಶರಣಬಸವ,ಗಂಗಮ್ಮ,ಕೆ.ಜಿ.ವೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.