ವಿವಿಧ ಬೇಡಿಕೆ ಈಡೇರಿಕಾಗಿ ಶಿಕ್ಷಣ ಸಚಿವರಿಗೆ ಮನವಿ ಪತ್ರ

 

ದಾವಣಗೆರೆ. ನ.೭; ವಿಕಲಚೇತನ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿಕ್ಷಣ ಸಚಿವರಾದ ಸುರೇಶಕುಮಾರ ಅವರಿಗೆ ಬೆಂಗಳೂರಿನ ಅವರ ಕಚೇರಿಯಲ್ಲಿ ವಿಕಲಚೇತನ ನೌಕರರ ಸಂಘದ ಮನವಿ ಪತ್ರ ಸಲ್ಲಿಸಲಾಯಿತು. ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಶಿಕ್ಷಕರ ವರ್ಗಾವಣೆಯ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಅವರ ಅಂಗವೈಲತ್ಯೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನು ಪ್ರತಿ ಬಾರಿ ತರಲು ಸೂಚಿಸುವ ಕ್ರಮವನ್ನು ಕೈಬೀಡಬೇಕು.ಈಗಾಗಲೇ ನೇಮಕಾತಿ ಸಮಯದಲ್ಲಿ ವೈದೈಕೀಯ ತಪಾಸಣೆ ಮಾಡಿದ ನಂತರವೇ ನೇಮಕಾತಿ ಆದೇಶವನ್ನು ನೀಡುವುದರ ಜೊತೆಗೆ ವಿಕಲಚೇತನರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿರುವಾಗ ಯಾಕೇ ಪದೇ ಪದೇ ವೈಧ್ಯಕೀಯ ಪ್ರಮಾಣಪತ್ರವನ್ನು ತರಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ವಿಷಯದ ಈ ಹಿಂದೆ ಹಲವು ಶಿಕ್ಷಣ ಸಚಿವರಿಗೂ ಮನವಿ ಮಾಡಿದರು ಕೂಡಾ ಯಾವುದೇ ಪ್ರಯೋಜವಾಗಿಲ್ಲ.ಕೂಡಲೇ ಪದೇ ಪದೇ ವೈದ್ಯಕೀಯ ಪ್ರಮಾಣ ಪತ್ರ ಕೇಲುವುದನ್ನು ನಿಲ್ಲಿಸಬೇಕು,ಮೂರು ವರ್ಷ ಒಂದು ಕಡೆಯಲ್ಲಿ ಕಾರ್ಯನಿರ್ವಹಿಸಬೇಕು ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು,ಘಟಕದ ಹೊರಗೆ ಎರಡು ಬಾರಿ ವರ್ಗಾವಣೆ ಹೊಂದಲು ಅವಕಾಶ ನೀಡಬೇಕು,ಬಡ್ತಿ ನೀಡುವ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಎ ಮತ್ತು ಬಿ ವಲಯಗಳ ಹುದ್ದೆಗಳನ್ನು ತೊರಿಸಬೇಕು,ಶಿಕ್ಷಣ ಇಲಾಖೆಯಲ್ಲಿ ವಿಕಲಚೇತನ ನೌಕರರಿಗೆ ಇರುವ ಪ್ಲೆಕ್ಸಿ ಸಮಯ ಜಾರಿಗೆ ಮಾಡಬೇಕು,ಯು.ಡಿ.ಐ.ಡಿ.ಕಾರ್ಡ ಹೊಂದಿರುವ ಶಿಕ್ಷಕರಿಗೆ ಪದೇ ಪದೇ ಪ್ರಮಾಣ ಪತ್ರ ಕೇಳಬಾರದು,ಸೇವಾ ಪುಸ್ತಕದಲ್ಲಿ ವಿಕಲಚೇತನರ ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಬೇಕು ಎಂದು ಹೇಳಿದರು. ಇದೇ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ವೆಬ್ ಸೈಟ್ ಅನ್ನು ಶಿಕ್ಷಣ ಸಚಿವರಾದ ಸುರೇಶಕುಮಾರ ಉದ್ಘಾಟನೆ ಮಾಡಿದರು.  ಮನವಿ ಸ್ವೀಕರಿಸಿದ ಬಳಿಕ ಶಿಕ್ಷಣ ಸಚಿವರಾದ ಸುರೇಶಕುಮಾರ ಮಾತನಾಡಿ ವಿಕಲಚೇತನ ಶಿಕ್ಷಕರ ಬೇಡಿಕೆಗಳು ನ್ಯಾಯಯುತವಾಗಿದ್ದು,ಅವುಗಳ ಬಗ್ಗೆ ಚರ್ಚೆ ಮಾಡಲು ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡುವ ಭರವಸೆ ನೀಡಿದರು.  ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ಕೊಪ್ಪಳ ಜಿಲ್ಲಾ ಖಜಾಂಚಿ ಕಾಶಿನಾಥ ಶಿರಿಗೇರಿ ಮುಂತಾದವರು ಹಾಜರಿದ್ದರು.ಪೋಟೊ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಣ ಸಚಿವರಾದ ಸುರೇಶಕುಮಾರ ಅವರಿಗೆ ವಿಕಲಚೇತನ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.