ವಿವಿಧ ಬೇಡಿಕೆಯೊಂದಿಗೆ ವಸತಿ ವಿದ್ಯಾರ್ಥಿನಿಯರ ಹೋರಾಟ

ಮಾನ್ವಿ,ಆ.೦೧ – ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಪದವಿ ಪೂರ್ವ ಕಾಲೇಜ ವಸತಿ ನಿಲಯದ ವಿದ್ಯಾರ್ಥಿನಿಯರು ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಪರಿಹಾರ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ದಲಿತ ಸಂಘಟನೆ ಮುಖಂಡರ ಸಹಯೋಗದೊಂದಿಗೆ ಪ್ರತಿಭಟನೆ ಮಾಡಿ ಒತ್ತಾಯಿಸಿತು..
ಹೋರಾಟದ ಮೂಲಕ ಮಾತಾನಾಡಿದ ಕೆಲ ವಿದ್ಯಾರ್ಥಿಯರು ನಮ್ಮ ವಸತಿ ನಿಲಯ ಸೇರಿದಂತೆ ಎಲ್ಲಾ ಬಾಲಕಿಯರ ವಸತಿ ನಿಲಯಗಳಲ್ಲಿ ತುಂಬಾ ಸಮಸ್ಯೆ ಉಂಟಾಗುತ್ತಿದೆ ಯಾರನ್ನು ಕೇಳಿದರು ಸರಿಯಾಗಿ ಸ್ಪಂದಿಸುತ್ತಿಲ್ಲ ಆದರಿಂದ ಕೆಲ ಸಂಘಟನೆ ಅಣ್ಣನವರ ಸಹಕಾರಿಂದ ಈ ಹೋರಾಟವನ್ನು ಹಮ್ಮಿಕೊಳ್ಳಾಗಿದ್ದು ಪ್ರಮುಖವಾಗಿ ನಮ್ಮ ವಸತಿ ನಿಲಯ ಸಂಪೂರ್ಣವಾಗಿ ಹಾಳಾಗಿದ್ದು ಅದನ್ನು ಕೂಡಲೇ ಬದಲಾವಣೆ ಮಾಡಬೇಕು ಹಾಗೂ ಮೇಲ್ವಿಚಾರಕರ ಕಿರುಕುಳ ಅತಿಯಾಗಿದ್ದು ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು, ವಿದ್ಯುತ್, ಆಹಾರ,ಶೌಚಾಲಯ, ಪುಸ್ತಕ,ಪತ್ರಿಕೆ,ಪೋಲಿ ಹುಡುಗರ ಕಾಟ, ಸೇರಿದಂತೆ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಯಾರು ಕೂಡ ಸ್ಪಂದಿಸುತ್ತಿಲ್ಲ ಕೆಟ್ಟು ಹೋದ ಆಹಾರವನ್ನು ನೀಡುತ್ತಾರೆ, ಕೂಡಲೇ ಬದಲಾವಣೆ ಮಾಡಬೇಕು ನಮ್ಮ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ತಾಲೂಕ ದಂಡಧಿಕಾರಿಗಳಿಗೆ ಹೋರಾಟದ ಮೂಲಕ ಒತ್ತಾಯಿಸಿದರು..
ನಂತರ ಪ್ರಭುರಾಜ ಕೊಡ್ಲಿ, ಮಲ್ಲೇಶ ಮಾಚನೂರು ಮಾತಾನಾಡಿ ಬಾಲಕಿಯರ ಸಮಸ್ಯೆಗಳಿಗೆ ಧ್ವನಿಗೂಡಿಸಿ ಕೂಡಲೇ ಅವರಿಗೆ ಮೂಲಭೂತ ಸೌಕರ್ಯಗಳನ್ನು ಹಾಗೂ ಸಮಸ್ಯೆಗಳಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ನಾಳೆಯಿಂದಲೇ ಅವರ ಪರವಾಗಿ ಹೋರಾಟವನ್ನು ರೂಪಿಸಲಾಗುತ್ತದೆ ಎಂದರು..
ಅದಕ್ಕೆ ಪ್ರತಿಯಾಗಿ ಗ್ರೇಡ್ ೨ ದಂಡಧಿಕಾರಿ ಅಬ್ದುಲ್ ವಾಹಿದ್ ಹಾಗೂ ಸಮಾಜ ಕಲ್ಯಾಣಧಿಕಾರಿ ರವೀಂದ್ರ ಉಪ್ಪಾರ ಮಾತಾನಾಡಿ ನಾಳೆಯೇ ಮೇಲ್ವಿಚಾರಕರನ್ನು ಬದಲಾವಣೆ ಮಾಡಿ ಹಾಗೂ ವಾರಕ್ಕೆ ಎರಡು ಬಾರಿ ವೈದ್ಯರನ್ನು ಕಳಿಸಲಾಗುತ್ತದೆ ಹಾಗೂ ಉತ್ತಮ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಪ್ರಭುರಾಜ ಕೊಡ್ಲಿ, ಮಲ್ಲೇಶ ಮಾಚನೂರು, ಹನುಮೇಶ ನಸ್ಲಾಪೂರು, ಚನ್ನಬಸವ ಮಾಡಗಿರಿ,
ಹೊಳೆಯಪ್ಪ, ನರಸಪ್ಪ ಜೂಕೂರು, ಅಧಿಕಾರಿಗಳಾದ ಅಬ್ದುಲ್ ವಾಹಿದ್, ರವೀಂದ್ರ ಉಪ್ಪಾರ, ರಾಮಚಂದ್ರ,ಪಿಐ ವೀರಭದ್ರಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.