ವಿವಿಧ ಬೇಡಿಕೆಗೆ ಆಗ್ರಹಿಸಿ ಛಾಯಾಗ್ರಹರು ಸಿಎಂ ಗೆ ಮನವಿ


ರಾಯಚೂರು.ಅ.9-ರಾಜ್ಯ ಛಾಯಾ ವೃತ್ತಿ ಸಮೂಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷವನ್ನು ಖಂಡಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ. ಇಲ್ಲವಾದಲ್ಲಿ ಅ.30ರಂದು ಬೆಂಗಳೂರು ಚಲೋ ಪ್ರತಿಭಟನೆ ಅಮ್ಮಿಕೊಳ್ಳಲಾಗುತದೆ ಎಂದು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಅಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೊರೊನ ಮಹಾಮಾರಿ ರೋಗದಿಂದ ಆಗುತ್ತಿರುವ ತೊಂದರೆ ರಾಜ್ಯದಲ್ಲಿ ಎಲ್ಲ ವೃತ್ತಿಪರ ಛಾಯಾಗ್ರಾಹಕರಿಗೆ ಅಪಾರ ಹಾನಿ ಯಾಗಿದ್ದು ಜೀವನ ನಡೆಸಲು ತೀವ್ರ ತೊಂದರೆ ಉಂಟಾಗಿದೆ ಆದಕಾರಣ ಸರ್ಕಾರ ಛಾಯಾಗ್ರಾಹಕರಿಗೆ ಕೋವಿಡ್ 19 ಹಾಗೂ ನೆರೆ ಸಂತ್ರಸ್ತರಿಗೆ, ವೃತ್ತಿಬಾಂಧವರಿಗೆ ಕೂಡಲೇ ವಿಶೇಷ ಘೋಷಿಸಬೇಕು, ನಿವೇಶನಗಳ ವ್ಯವಸ್ಥೆ ಮಾಡಬೇಕು, ಕೆಪಿಎ ಛಾಯಾ ಭವನಕ್ಕೆ ನಿವೇಶನ ಒದಗಿಸಬೇಕು, ಸರ್ಕಾರಿ ಕೆಲಸಗಳಿಗೆ ,ಸ್ಟುಡಿಯೋ ಪಾಸ್ಪೋರ್ಟ್ ತೆಗೆಯಲು ವೃತ್ತಿಪರರಿಗೆ ಆದ್ಯತೆ ನೀಡಬೇಕು, ರಾಜ ರಾಜೇಂದ್ರ ಸರ್ಕಾರಿ ಚುನಾವಣೆಗಳಲ್ಲಿ ಛಾಯಾಗ್ರಹಣ ಸೇವೆ ಮಾಡಲು ಸಂಘದಿಂದ ಗುರುತಿಸಲ್ಪಟ್ಟ ವರಿಗೆ ನೀಡಬೇಕು, ಸರ್ಕಾರದಿಂದ ಆರೋಗ್ಯ ವಿಮೆ ಅಪಘಾತ ವಿಮೆ ಪರಿಕರಗಳಾಗಿವೆ ಹಾಗೂ ಜೀವವಿಮೆ ಯೋಜನೆಗಳನ್ನು ನೀಡಬೇಕು ಇಲ್ಲವಾದಲ್ಲಿ ಅ.31ರಂದು ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನು ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜು ಎನ್ ಇಲ್ಲೂರ್, ಶರಣಬಸವ ಹಿರೇಮಠ್ ,ವಿಶ್ವನಾಥ್ ಚೌಧರಿ, ಅಕ್ಬರ್, ಶ್ರೀನಿವಾಸ ಇನಮ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.