ವಿವಿಧ ಬೇಡಿಕೆಗೆ ಆಗ್ರಹಿಸಿ ಕಾರ್ಮಿಕ ಸಚಿವರಿಗೆ ಮನವಿ


ಸಂಜೆವಾಣಿ ವಾರ್ತೆ

ದಾವಣಗೆರೆ.ನ.೫: ಜಿಲ್ಲೆಯ ಹರಿಹರ ನಗರದ ಬಿಡಿ ಕಾರ್ಮಿಕರ ಕಾಲೋನಿಯನ್ನು ನಗರಸಭೆಗೆ ಸೇರ್ಪಡೆಗೊಳಿಸಿಕೊಂಡು ಹಕ್ಕುಪತ್ರ ನೀಡಿ ಖಾತೆ ನೋಂದಣಿ ಮಾಡಿಕೊಡಬೇಕು ಮತ್ತು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ವಿವಿಧ ಕಚೇರಿಯಲ್ಲಿ ಹೋರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ನೇರ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ಕಾರ್ಮಿಕ ಸಚಿವ ಸಂತೊಷ ಲಾಡ್ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ಮುಕ್ತಿಯರ ಅಹ್ಮದ್, ರಾಜಿಕ್‌ವುಲ್ಲಾ, ಮಕಬುಲ, ರಫೀಕ್, ರೇಹಮನಸಾಬ್, ನಜೀರ್, ಉಷೇನಮೀಯ ಮತ್ತಿತರರು ಹಾಜರಿದ್ದರು.