ವಿವಿಧ ಬೇಡಿಕೆಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ

ಇಂಡಿ:ಫೆ.10: ಇಂಡಿ ಹಾಗೂ ಚಡಚಣ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಆಧೀನದಲ್ಲಿ ನೆಡಯುತ್ತಿರುವ ಮ್ಯಾಟ್ರೀಕ ಪೂರ್ವ ಮತ್ತು ಮ್ಯಟ್ರೀಕ ನಂತರದ ವಸತಿನೀಲಯಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಖಂಡಿಸಿ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಹಾಗೂ ತಾಲೂಕ ಸಮಿತಿಯಿಂದ ಮೇರವಣಿಗೆ ಮೂಲಕ ನಗರದ ಪ್ರವಾಸಿ ಮಂದಿರದಿಂದ ಹಲಗೆ ಬಾರಿಸುತ್ತ ಸಿಂಘ ಹೋಡೆಯುತ್ತ ನೂರಾರು ಪದಾಧಿಕಾರಿಗಳೋಂದಿಗೆ ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ ಹಾಕಲಾಯಿತು.
ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ಬಿ ಜೆ ಇಂಡಿ ಅವರನ್ನು ಅಮಾನತ್ತು ಮಾಡಬೇಕು ಎಂದು ಗೋಷಣೆ ಹಾಕುತ್ತಾ ಕೆಲ ಹೊತ್ತಿನವರೆಗೆ ಪ್ರತಿಭಟನೆ ಮಾಡಿದರು. ನಂತರ ಟಿಪ್ಪು ಸುಲ್ತಾನ ವೃತ್ತದ ಮೂಲಕ ಬಸವೇಶ್ವರ ವೃತ್ತ ಸೇರಿದಂತೆ ಡಾ, ಬಾಬಾಸಾಹೇಬ ಅಂಬೇಡ್ಕರ ವೃತ್ತದಲ್ಲಿ ಕಾರ್ಯಕರ್ತರಿಂದ ಅವರ ಪುತ್ತಳಿಗೆ ಹೂ ಗಳಿಂದ ಮಾಲಾರ್ಪಣೆ ಮಾಡಿ ನೇರವಾಗಿ ಆಡಳಿತ ಸೌಧಕ್ಕೆ ತಲುಪಿ ಅಲ್ಲಿ ತಹಶೀಲ್ದಾರ ಮಂಜುಳಾ ನಾಯಕ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕು ಮುಂಚೆ ಸಭೆ ಮಾಡಲಾಯಿತು. ಸರಕಾರದಿಂದ ಪ್ರತಿ ವರ್ಷ ಬರುವ ಲಕ್ಷಾಂತರ ರೂಪಾಯಿಗಳ ಅನುಧಾನವನ್ನು ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇeವಾಬ್ದಾರಿಯಿಂದ ಸದುಪಯೋಗವಾಗಿರುವುದಿಲ್ಲ. ವಸತಿ ನೀಲಯಗಳಲ್ಲಿ ವಿಧ್ಯಾರ್ಥಿಗಳಿಗೆ ಶೌಚಾಲೆ, ಪ್ಯಾನ್, ಸ್ನಾನದಗೃಹಗಳು, ಇಲ್ಲದೆ ವಿಧ್ಯಾರ್ಥಿಗಳು ತೋಂದರೆ ಅನುಭವಿಸುತ್ತಾರೆ. ಸರಕಾರದಿಂದ ಅನುಧಾನ ಬಿಡುಗಡೆ ಮಾಡುತ್ತಿದ್ದರು ಅಧಿಕಾರಿಗಳು ಈ ಸೌಲಭ್ಯಗಳು ಒದಗಿಸಿರುವುದಿಲ್ಲ. ವಿಧ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರು ಹಾಜರಾತಿಯಲ್ಲಿ ಹೆಚ್ಚಿಗೆ ತೊರಿಸುತ್ತಿರುವುದು ಕಂಡು ಬಂದಿರುತ್ತದೆ. ಅನುಧಾನ ದುರುಪಯೋಗ ವಾಗಲು ಕಾರಣರಾದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ವಸತಿ ನೀಲಯಗಳಿಗೆ ವಿಜಯಪೂರ ಜನತಾ ಬಜಾರದಿಂದ ಆಹಾರ ದಾನ್ಯ ಖರಿದಿಸಬೇಕು ಎಂಬ ನೀಯಮ ವಿದ್ದರು ಅಧಿಕಾರಿಗಳ ಸಹಕಾರದಿಂದ ವಸತಿ ನೀಲಯಗಳಿಗೆ ಸ್ಥಳೀಯ ಕಿರಾಣಿ ಅಂಗಡಿಗಳಿಂದ ಆಹಾರಧಾನ್ಯ ಖರಿದಿಸಿ ಹಣ ಉಳಿತಾಯ ಮಾಡಿಕೋಳ್ಳತಿದ್ದು ಇದಕ್ಕೆ ಸಂಬಂದಿಸಿದಂತೆ ತನಿಖೆ ಆಗಬೇಕು. ತಾಲೂಕಿನಲ್ಲಿ ವಿವಿಧ ಇಲಾಖೆಗಳು ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳು ಎಸ್ ಸಿ ಕೇರಿಗಳಲ್ಲಿ ಆಗದೆ ಇರುವ ಕುರಿತು ಅಧಿಕಾರಿಗಳು ಪರಿಶೀಲಿಸಿರುವುದಿಲ್ಲ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಅನುಧಾನ ದುರುಪಯೋಗವಾಗಿರುವ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿದರು. ಈ ಸಂರ್ಭದಲ್ಲಿ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಧರ್ಮರಾಜ ಸಾಲೊಟಗಿ, ತಾಲೂಕ ಅಧ್ಯಕ್ಷ ಶಟ್ಟೆಪ್ಪ ಶೀವಪೂರ, ವಿಧ್ಯಾರ್ಥಿ ಘಟಕದ ಅಧ್ಯಕ್ಷ ರಾಜಶೇಖರ ಸಿಂಧೆ, ಸುನೀಲ ಗಾಯಕವಾಡ ಮಂಜುನಾಥ ಮೆಲಿನಕೇರಿ, ಜೈಭೀಮ ಮೇಲಿನಕೇರಿ,ಮಿಥುನ ಬನಸೋಡೆ, ಯಲ್ಲಪ್ಪ ಗಜಾಕೋಶ, ನಾಗರಾಜ ತಾಂಡವಾಡಿ, ಮಲ್ಲಿಕಾರ್ಜುನ, ಪಾಯಾರಾಮ ಶಿರಗೂರ, ಸಿದ್ದರಾಮ ಶಿರಗೂರ, ಪ್ರದಿಪ ಹಳಗುಣಕಿ, ಹರಿಶ ಮಡ್ಡಿಮನಿ, ಶಣ್ಮುಖ ಕಾಂಬಳೆ, ಮಾಂತೇಶ ಮೇಲಿನಮನಿ, ರಾಕೇಶ ಕ್ಷತ್ರಿ, ರಫೀಕ ಬಡಿಗೇರ, ಮಲಕಾರಿ ಕಾಂಬಳೆ, ಲಕ್ಷ್ಮಣ ಗುಂದವಾನ, ವಿಕಾಸ ಬನಸೋಡೆ, ನಿತೀನ ಬನಸೋಡೆ, ಅಜಯ ಧರೆನವರ, ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.