ವಿವಿಧ ಬೇಡಿಕೆಗಾಗಿ ಪಾದಯಾತ್ರೆ

ತಾಳಿಕೋಟೆ:ಆ.6: ಹಡಗಿನಾಳ ಗ್ರಾಮದ ಕಡೆಗೆ ತೆರಳುವ ಡೋಣಿ ನಧಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆಗೆ ನೇರ ರಸ್ತೆ ಕಲ್ಪಿಸುವ ಕುರಿತು ಹಾಗೂ ಪುರಸಭೆಯಲ್ಲಿ ನಡೆದ ಅವ್ಯವಹಾರ ತನಿಖೆಗೆ ಒಳಪಡಿಸಬೇಕೆಂದು ತಾಳಿಕೋಟೆ ಅಭಿವೃದ್ದಿ ಹೋರಾಟ ಸಮಿತಿಯು ಕೈಗೊಂಡ ಪಾದಯಾತ್ರೆಯ ಹೋರಾಟಕ್ಕೆ ಅಸ್ಕಿ ಪೌಂಡೇಶನ್ ಮುಖ್ಯಸ್ಥ ಸಿ.ಬಿ.ಅಸ್ಕಿ ನೇತೃತ್ವದಲ್ಲಿ ನೂರಾರು ಜನರು ಬೆಂಬಲ ಸೂಚಿಸಿದರು.

  ಶುಕ್ರವಾರರಂದು ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಮತ್ತು ನದೀಂ ಕಡು ಅವರು ತಲೆಯ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿ ವಿಜಯಪೂರಕ್ಕೆ ಪಾದಯಾತೆ ಕೈಗೊಂಡ ಸಮಯದಲ್ಲಿ ಕೊಣ್ಣೂರ ಗ್ರಾಮದ ಕ್ರಾಸ್‍ನಲ್ಲಿ ಹೋರಾಟಗಾರರಿಗೆ ಅಲ್ಪೋಹಾರದ ವ್ಯವಸ್ಥೆಯನ್ನು ಮಾಡಿದಲ್ಲದೇ ನಿಮ್ಮ ನ್ಯಾಯಯುತ ಹೋರಾಟಕ್ಕೆ ಅಸ್ಕಿ ಪೌಂಡೇಶನ್ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದು ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಹೇಳಿದರು, ಈ ಹಿಂದೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸತ್ಯಾಗ್ರಹ ಕೈಗೊಂಡಾಗಲೂ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲವನ್ನು ನೀಡಿದ್ದೇನೆ ಆದರೆ ಅಧಿಕಾರಿಗಳ ಮೊಂಡುತನದಿಂದ ಹೋರಾಟದ ಸ್ವರೂಪ ಬದಲಾವಣೆಗೊಂಡಿದೆ ಇನ್ನು ಮುಂದೆ ಅಧಿಕಾರಿಗಳು ಹೋರಾಟಗಾರರ ಬೇಡಿಕೆ ಇಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ, ಸಚೀವರನ್ನು ಮುತ್ತಿಗೆ ಹಾಕುವಂತಹ ಕೆಲಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಏಚ್ಚರಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಮಾತನಾಡಿ ಕಳೆದ ನಾಲ್ಕು ತಿಂಗಳ ಹಿಂದೆ ಸತ್ಯಾಗ್ರಹ ಕೈಗೊಂಡಾಗ ಬೇಡಿಕೆಗಳನ್ನು ಇಡೇರಿಸುವದಾಗಿ ಅಧಿಕಾರಿಗಳು ಲೀಖಿತ ಬರವಸೆ ನೀಡಿ ಹೋಗಿದ್ದಾರೆ ಆದರೆ ಯಾವುದೇ ಪ್ರಯೋಜನೆಗೆ ಬಂದಿಲ್ಲಾ ಅಂತವರನ್ನು ಅಮಾನತ್ತುಗೊಳಿಸಬೇಕು ಮತ್ತು ಪುರಸಭೆಯಲ್ಲಿ ಅವ್ಯವಹಾರಕ್ಕೆ ಕಾರಣರಾದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದರು.

ಪ್ರತಿಭಟನೆಯಲ್ಲಿ ಅಸ್ಕಿ ಪೌಂಡೇಶನ್ ಸದಸ್ಯರುಗಳು ಪ್ರತಿಭಟನಾ ಕಾರರೊಂದಿಗೆ ಹೆಜ್ಜೆ ಹಾಕಿದರು.

ಈ ಸಮಯದಲ್ಲಿ ಅಸ್ಕಿ ಪೌಂಡೇಶನ್‍ದ ನಿವೃತ್ತ ಶಿಕ್ಷಕ ಜಿ.ಜಿ.ಅಸ್ಕಿ, ಶರಣಯ್ಯ ಹಿರೇಮಠ, ರೇವಣಸಿದ್ದನಗೌಡ ಹಡಲಗೇರಿ, ಬಸವರಾಜ ನಾಯ್ಕೋಡಿ, ಮಹೇಶ ಅಸ್ಕಿ, ಲಾಲಸಾಬ ಠಕ್ಕಳಗಿ, ಮೊಕಾಶಿ ಮಕಾಂದಾರ, ಬಸನಗೌಡ ಯಾಳವಾರ, ಪರಮೇಶ, ತಿಪ್ಪಣ್ಣಜ್ಯೋತಿ, ವೀರೇಶಗೌಡ ಅಸ್ಕಿ, ಸುರೇಶಕುಮಾರ ಹಜೇರಿ, ನದೀಂ ಕಡು, ಪತ್ತೇಅಹ್ಮದ ನಾಯ್ಕೋಡಿ, ಸುರೇಶ ಹಜೇರಿ, ರವಿ ಕಟ್ಟಿಮನಿ, ನಿಂಗನಗೌಡ ದೇಸಾಯಿ, ರಮೇಶ ಮೋಹಿತೆ, ಮೊದಲಾದವರು ಇದ್ದರು.


   ತಾಳಿಕೋಟೆ ಅಭಿವೃದ್ದಿ ಹೋರಾಟ ಸಮಿತಿ ಕೈಗೊಂಡಿರುವ ಹೋರಾಟಕ್ಕೆ ಅಸ್ಕಿ ಪೌಂಡೇಶನ್ ಸದಾ ಬೆಂಬಲವಾಗಿ ನಿಲ್ಲುತ್ತದೆ ಅಧಿಕಾರಿಗಳು ಮೊಂಡುತನ ಬಿಟ್ಟು ಹೋರಾಟಗಾರರ ಬೇಡಿಕೆ ಇಡೇರಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವಂತಹ ಕೆಲಸ ಮುಂದೆ ನಡೆಯುತ್ತದೆ.
 ಸಿ.ಬಿ.ಅಸ್ಕಿ
                               ಅಸ್ಕಿ ಪೌಂಡೇಶನ್ ಅಧ್ಯಕ್ಷ