ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನರಿಂದ ಮನವಿ ಸಲ್ಲಿಕೆ

ವಿಜಯಪುರ,ಫೆ.16:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನರು ತಹಸೀಲ್ದಾರÀರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷÀ ವಿನೋದ ಎಂ. ಖೇಡ ಅವರು ಮತನಾಡಿ, ವಿಕಲಚೇತನರಿಗೆ ಮಸಾಶನವನ್ನು ಸರಿಯಾಗಿ ನೀಡುತ್ತಿಲ್ಲ. ವಿಕಲಚೇತನರಿಗೆ 2016ರ ಅಧಿನಿಯಮದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಮುಕ್ತವಾದ ವಾತವರಣ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ ಅವರು ಮಾತನಾಡಿ, ಮನೆಗಳ ಹಂಚಿಕೆಯಲ್ಲಿ ವಿಕಲಚೇತನರಿಗೆ ಸರಿಯಾಗಿ ನೀಡಬೇಕೆಂದು ಮತ್ತು ಸರಕಾರದ ವಿವಿಧ ಇಲಾಖೆಯಲ್ಲಿನ ಸೌಲಭ್ಯವನ್ನು ಪಡೆಯಲು ಅವರಿಗೆ ಯಾವದೇ ರೀತಿಯ ಸರತಿ ಸಾಲು (ಕ್ಯೂ) ಇಲ್ಲದೇ ಇರುವ ಬಗ್ಗೆ ನಾಮಫÀಲಕವನ್ನು ಅಳವಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಘಟಕದ ಅಧ್ಯಕ್ಷÀ ಅಂಬಣ್ಣ ಗುನ್ನಾಪೂರ, ತಾಲೂಕಾ ಘಟಕದ ಉಪಾಧ್ಯಕ್ಷೆ ಶಂಕ್ರೆಮ್ಮ ಕೋರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಕಲ್ಲಗುಡಿ, ರಾಜು ಕುಮಟಗಿ, ಭೀಮಶಿ ಪೂಜಾರಿ ಇನ್ನೂ ಮುಂತಾದವರಿದ್ದರು.