ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ


ನವಲಗುಂದ,ಡಿ.3: ಶೀಘ್ರ ಟೆಂಡರ್ ಕರೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳಸಾ ಬಂಡೂರಿ ಕಾಮಗಾರಿ ಕೆಲಸ ಪ್ರಾರಂಭ ಮಾಡಬೇಕು ಹಾಗೂ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಚರ್ಚೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿ ಮಹದಾಯಿ ರೈತ ಹೋರಾಟಗಾರರು ಶಿರೇಸ್ತದಾರ ಶೋಭಾ ಹುಲ್ಲಣ್ಣವರ ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ರೈರಿಗೆ ಪ್ರತಿ ಹೇಕ್ಟರ್ ಗೆ ಇಪ್ಪತ್ತೈದು ಸಾವಿರ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದಾರೆ.
ಎಸ್ ಬಿ ಪಾಟೀಲ್, ಸಿದ್ದಪ್ಪ ಮುಪ್ಪಯ್ಯನವರ್, ಮಲ್ಲೇಶ್ ಉಪ್ಪಾರ, ಬಸನಗೌಡ ಹುಣಸಿಕಟ್ಟೆ, ಸಿದ್ದಲಿಂಗಪ್ಪ ಹಳ್ಳದ, ಮಲ್ಲಪ್ಪ ಬಸೆಗೋನ್ನವರ , ಮುರಗೇಪ್ಪ್ ಪಲ್ಲೆದ್, ಬಸಪ್ಪ ಮುಪ್ಪಯ್ಯನವರ , ಕರಿಯಪ್ಪ ತಳವಾರ್, ಗಂಗಪ್ಪ ಸಂಗಟಿ, ಶಿವಪ್ಪ ಸಂಗಳ್, ಸಂಗಪ್ಪ ನೀಡವನಿ, ಗೋವಿಂದರೆಡ್ಡಿ ಮೊರಬದ ಇತರರು ಉಪಸ್ಥಿತರಿದ್ದರು.