ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

ಸಿರವಾರ.ನ.೧೦- ಕರ್ನಾಟಕ ರಾಜ್ಯ ಸವಿತಾ ಸಮಾಜ (ರಿ) ತಾಲೂಕು ಘಟಕದ ವತಿಯಿಂದ ಮೀಸಲಾತಿ, ಜಾತಿ ನಿಂದನೆ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ರವಿ ಎಸ್.ಅಂಗಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಸವಿತಾ ಸಮಾಜವು ಪಾರಂಪರಿಕ ವೈದ್ಯ ವೃತ್ತಿ, ಕ್ಷೌರಿಕ ವೃತ್ತಿ, ಡೋಲು ನಾದಸ್ವರ ನುಡಿಸುವ ವೃತಿಯನ್ನು ಸೇವಾ ಮನೋಭಾವದ ಮೂಲಕ ಮಾಡಿಕೊಂಡು ಬರುತ್ತಿದ್ದು, ನಾವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿಯುವ ಜೊತೆಗೆ ಸಮಾಜದಲ್ಲಿ ಶೋಷಣೆ ಮತ್ತು ಅಸ್ಪೃಶ್ಯತೆ ಒಳಗಾಗಿದ್ದೇವೆ. ಇದರಿಂದ ನಾವು ಹೊರಬರಬೇಕಾದರೆ ಸವಿತಾ ಸಮಾಜಕ್ಕೆ ಮೀಸಲಾತಿ, ಜಾತಿ ನಿಂದನೆ ಕಾಯ್ದೆಯನ್ನು ಜಾರಿಗೊಳಿಸುವ ಜೊತೆಗೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಸವಿತಾ ಸಮಾಜದ ತಾಲ್ಲೂಕು ಘಟಕದ ಪಿ.ನರಸಿಂಹಲು, ಪಿ.ವೆಂಕಟೇಶ, ಭೀಮಪ್ಪ ಕವಿತಾಳ, ರಾಘವೇಂದ್ರ ಚಾಗಭಾವಿ, ಕೆ.ಎಂ.ಯಲ್ಲಪ್ಪ, ಎನ್.ಶ್ರೀನಿವಾಸ, ಎನ್.ಜನಾರ್ಧನ, ಕೇಶವಲು ಚಾಗಭಾವಿ, ವೆಂಕಟೇಶ, ಧಶರಥ, ಎನ್.ಮಲ್ಲಿಕಾರ್ಜುನ, ವಿನೋದ, ಮುದುಕಪ್ಪ,ವಿನೋದ ಸೇರಿದಂತೆ ಸಮಾಜದ ಮುಖಂಡರು ಇದ್ದರು.