ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಕೆ


ಬಾದಾಮಿ,ಸೆ 25: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ(ಸಿಐಟಿಯು) ಆಶಾ ಕಾರ್ಯಕರ್ತೆಯರ ಸಂಘ(ಸಿಐಟಿಯು) ಕರ್ನಾಟಕ ರಾಜ್ಯ ಜಂಟಿ ಸಮಿತಿಗಳು ವತಿಯಿಂದ ಶುಕ್ರವಾರ ಸಂರಕ್ಷಣೆ, ಮರಣಪರಿಹಾರ, ಕನಿಷ್ಟ ವೇತನ, ಪಿಂಚಣಿಗಾಗಿ ಒತ್ತಾಯಿಸಿ ಉಪ ತಹಶಿಲ್ದಾರ ಬೊಮ್ಮನ್ನವರ ಇವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸ್ವಾತಂತ್ರ್ಯದ ನಂತರ ದೇಶವು ಒಂದು ದೊಡ್ಡ ಸವಾಲನ್ನು ಎದುರಿಸುತ್ತಿದೆ. ಕೋವಿಡ್-19 ರ ಸಾಂಕ್ರಾಮಿಕ ಪಿಡುಗಿನ ಪರಿಣಾಮವಾಗಿ ದುಡಿಯುವ ಜನರ ದೊಡ್ಡ ವಿಭಾಗದ ಉದ್ಯೋಗ ಮತ್ತು ಆದಾಯ ನಷ್ಟವಾಗಿದೆ. ಎರಡನೇ ಅಲೆಯಲ್ಲಿ ಆರೋಗ್ಯ ವ್ಯವಸ್ಥೆಯ ಪ್ರಮುಖ ದೌರ್ಬಲ್ಯಗಳನ್ನು ನಮ್ಮ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಹಿರಂಗಪಡಿಸಿದೆ. ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಸಂಪೂರ್ಣ ಕುಸಿತ ಮತ್ತು ಸಾವಿರಾರು ಅಮೂಲ್ಯ ಜೀವಗಳ ನಷ್ಟವನ್ನು ಆಘಾತ ಮತ್ತು ದು:ಖದಿಂದ ಮಾತ್ರ ನೆನಪಿಸಿಕೊಳ್ಳಬಹುದು. ಈಗಲೂ ಮುಂದುವರಿದ 2 ನೇ ಅಲೆಗೆ ಸಂಬಂಧಿಸಿದ ಆರೋಗ್ಯ ಬಿಕ್ಕಟ್ಟು ಮತ್ತು ಸಂಭವನೀಯ 3 ನೇ ಅಲೆಯ ಸರಿಯಾದ ವೈಜ್ಞಾನಿಕ ಯೋಜನೆ ಮತ್ತು ಬೃಹತ್ ಸಮಯೋಚಿತ ವ್ಯಾಕ್ಸಿನೇಷನ್ ಅಭಿಯಾನದ ತುರ್ತು ಅಗತ್ಯವನ್ನು ಬಹಿರಂಗಪಡಿಸಿತು. ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ, ತರಬೇತಿ ಮತ್ತು ಆರೋಗ್ಯ ಸಿಬ್ಬಂದಿ ನೇಮಕಾತಿ ಇತ್ಯಾದಿ ಲಾಕ್ ಡೌನ್ ಮತ್ತು ಆರ್ಥಿಕ ಕುಸಿತದಿಂದಾಗಿ ಉದ್ಯೋಗಗಳು ಮತ್ತು ಜೀವನೋಪಾಯದ ದೊಡ್ಡ ಪ್ರಮಾಣದ ನಷ್ಟ ಮತ್ತು ಇದರ ಪರಿಣಾಮವಾಗಿ ಅಪೌಷ್ಟಿಕತೆ ಮತ್ತು ಬಡತನವು ದೇಶದಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ.
ಆರೋಗ್ಯ ಬಿಕ್ಕಟ್ಟು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಲು ಸರ್ಕಾರಗಳ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿದೆ. ಸಾರ್ವಜನಿಕ ವಲಯದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿಯ ಕೆಲಸಗಾರರನ್ನು ಅವಲಂಬಿಸಿದೆ. ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿರುವ ಈ ಮಂಚೂಣಿ ಕೆಲಸಗಾರರಲ್ಲಿ ಪ್ರಮುಖ ಭಾಗವೆಂದರೆ ಪ್ರೀಮ್ ವರ್ಕಸ್‍ಗಳಾದ ಅಂಗನವಾಡಿ ಹಾಗೂ ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ, ಪಿಂಚಣಿ ಇತರ ಸೌಲಭ್ಯಗಳನ್ನು ನೀಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಸಿಯೂಟ ಅಡಿಗೆ ಸಿಬ್ಬಂದಿಗಳಾದ ಆರ್.ಡಿ.ಹುಲ್ಲೂರ, ಹೇಮಾಶ ಗೌಡರ, ಬಸಮ್ಮ ರೋಣದ, ಮಲ್ಲಮ್ಮ ರಿತ್ತ, ನೀಲಾಕ್ಷ ಯಂಡಿಗೇರಿ, ಮಲ್ಲಮ್ಮ ಗೌಡರ, ಎಲ್.ಎಂ.ಚಿಕ್ಕನ್ನವರ, ಎಂ.ಎಂ.ಕುಡಚಿ, ಎಸ್.ಎಲ್.ಕಪಲಿ ಸೇರಿದಂತೆ ಮುಂತಾದವರು ಹಾಜರಿದ್ದರು.