ವಿವಿಧ ಬೇಡಿಕೆಗಳು ಈಡೇರಿಕೆ ಒತ್ತಾಯಸಿ ಪ್ರತಿಭಟನೆ 

ರಾಯಚೂರು, ಆ.01ವಿವಿಧ ಬೇಡಿಕೆಗಳು ಈಡೇರಿಕೆ ಒತ್ತಾಯಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ  ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸ್ಥಾನಿಕ ಅಧಿಕಾರಿಗಳಿಗೆ ಮನವಿ  ಸಲ್ಲಿಸಿ ಒತ್ತಾಯಸಿದರು.

ಬಗರ್ ಹುಕಂ ಮತ್ತು ಸರಕಾರಿ ಗೈರಾಣ ಭೂಮಿ, ಪಡ ಭೂಮಿ, ಸಾಗುವಳಿದಾರರಿಗೆ ಪಟ್ಟಾ ನೀಡಬೇಕು. ಅರಣ್ಯ ಇಲಾಖೆಧಿಕಾರಿಗಳು ಸಾಗುವಳು ದಾರರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಮತ್ತು ಅವರ ಭೂಮಿಗಳಲ್ಲಿ ಟ್ರಾಂಚ್‌ಗಳನ್ನು ತೆಗೆಯುವುದನ್ನು ಸಸಿಗಳನ್ನು ನೋಡುವುದನ್ನು ತಕ್ಷಣವೇ ನಿಲ್ಲಿಸಬೇಕು.

ಮಹಾತ್ಮಾ  ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸಗಾರರಿಗೆ ಒಂದು ದಿನಕ್ಕೆ  ರೂ 309 ಕೂಲಿ ಕೊಡಲೇ ಬೇಕು, ಅಳತೆಯ ನೆಪದಲ್ಲಿ 309 ರಲ್ಲಿ ರೂ 20 ರಿಂದ 30

ರೂಪಾಯಿಗಳಲ್ಲಿ ಕೂಲಿ ಕಡಿತ ಮಾಡಿ ಕೂಲಿ ಕೊಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು.

 ಜೂನ್  ಮತ್ತು ಜುಲೈ-2022 ರಲ್ಲಿ ಕೆಲಸ ಮಾಡಿದ ಉದ್ಯೋಗ ಖಾತ್ರಿ ಕೆಲಸ ಬಾಕಿ ಹಣವನ್ನು ಕೂಡಲೇ  ಅವರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಬೇಕು.

 ಎಸ್.ಸಿ.ಮತ್ತು ಎಸ್.ಸಿ. ಸಮುದಾಯಗಳಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಭೂಮಿ ವಿತರಣೆಯೊಂದಿಗೆ 2013ರ ಭೂ ಸ್ವಾಧೀನ ಕಾಯಿದೆಯನ್ನು ಜಾರಿಗೆ ತರಬೇಕು. ಪುನಃ ವಸತಿ ಕಲ್ಪಿಸದೇ  ಯಾರನ್ನು ಒಕ್ಕಲಿಬ್ಬಿಸಬಾರದು ಪುನರ್ ವಸತಿ ಕೇಂದ್ರಗಳಲ್ಲಿ ವಾಸಕ್ಕೆ ಸರ್ಮಕ ಮನೆ ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳನ್ನು ತಪ್ಪದೇ ಒದಗಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಇದರಲ್ಲಿ ದ್ವೀದಳ ದಾನ್ಯಗಳು ಎಣ್ಣೆಗಳು, ಸಾಂಬರ್ ಪದಾರ್ಥಗಳು ಮತ್ತು ತರಕಾರಿಗಳನ್ನು ಒಳಗೊಂಡ ಪರಿಪೂರ್ಣವಾದ ಆಹಾರ ಪ್ಯಾಕೇಜ್‌ ನೀಡಬೇಕು.

ದಲಿತರ ಮೇಲಿನ ದೌರ್ಜನ್ಯಗಳನ್ನು ಕಟ್ಟು ನಿಟ್ಟಾಗಿ ತಡೆಗಟ್ಟಬೇಕು. ಎಸ್.ಸಿ. ಮತ್ತು ಎಸ್.ಟಿ. ದೌಜನ್ಯ ತಡೆ ಕಾಯ್ದೆ 1989 ನ್ನು ಬಲ ಪಡಿಸಿ ಸರ್ಮಾಪಕವಾಗಿ ಜಾರಿ ಮಾಡಬೇಕು. ಪೊಲಿಟ್ ಠಾಣೆಯಲ್ಲಿ ಜಾಮೀನು ನೀಡಲು ಅವಕಾಶ ನೀಡುವ ಸೆಕ್ಷನ್ 41ನ್ನು ರದ್ದು ಮಾಡದೆ ದಲಿತರ ವಿರುದ್ಧ ದೌರ್ಜನ್ಯ ವೇಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಪ್ರಕರಣವನ್ನು ಬಾವಿಲಿ ಮಾಡಬೇಕು.

 ಕೇಂದ್ರ ಮತ್ತು ರಾಜ್ಯ ಬಜಟ್‌ನಲ್ಲಿ ಎಸ್‌.ಸಿ. ಎಸ್.ಟಿ ಉಪ ಯೋಜನೆಯನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು. ಇದರ ಅನುಷ್ಠಾನದಲ್ಲಿ ಉಲ್ಲಂಘನೆ ಮಾಡುವವರನ್ನು ಅರ್ಥಿಕ ಕ್ರಿಮನಲ್  ಅಪರಾಧಿಗಳೆಂದು ಪರಿಗಣಿಸಬೇಕು.

ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿ ಮಾಡಬೇಕು. ಮೀಸಲು ಕೇಂದ್ರದಲ್ಲಿ ಬ್ಯಾಕ್‌ ಹುದ್ದೆಗಳನ್ನು ಭರ್ತಿ ಮಾಡಬೇಕು.

 ಕೃಷಿ ಕೂಲಿಕಾರರ ಕನಿಷ್ಠ ವೇತನವನ್ನು ಪರಿಷ್ಕರಿಸಬೇಕು ಮತ್ತು ಅದನ್ನು ಹಣದುಬ್ಬರ ದರಕ್ಕೆ ಜೋಡಿಸಬೇಕು. ಸಮಾನ ವೇತನ ನೀಡಬೇಕು. ಕೃಷಿ ಕೂಲಿಕಾರರ ವೇತನವನ್ನು ಇತ್ತಿಚಿನ ವೇತನ ಆಯೋಗದ ವರದಿಗೆ ಅನುಗುಣವಾಗಿರಬೇಕು ಮತ್ತು ಪ್ರತಿ 2 ವರ್ಷಕೊಮ್ಮೆ ಅದನ್ನು ಪರಿಷ್ಠರಿಸಬೇಕೆಂದು ಒತ್ತಾಯಸಿದರು.

ಈ ಸಂದರ್ಭದಲ್ಲಿ ಕರಿಯಪ್ಪ ಅಚ್ಚೋಳಿ, ವಿರೇಶ, ಶಂಕ್ರಪ್ಪ ಸೇರಿದಂತೆ ಉಪಸ್ಥಿತರಿದ್ದರು.