ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅತಿಥಿ ಶಿಕ್ಷಕರಿಂದ ಸಚಿವರಿಗೆ ಮನವಿ

ಮಾನ್ವಿ.ಡಿ.೧೦- ಪ್ರತಿ ವರ್ಷ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು ಮೊದಲು ಕಾರ್ಯನಿರ್ವಹಿಸಿದವರಿಗೆ ಆದ್ಯತೆ ನೀಡಬೇಕು. ಅತಿಥಿ ಶಿಕ್ಷಕ, ಶಿಕ್ಷಕಿಯರಿಗೆ ಸೇವಾ ಭದ್ರತೆ ಹಾಗೂ ಶೇ.೫% ರಷ್ಟು ಕೃಪಾಂಕ ಪ್ರತಿವರ್ಷ ನೀಡಬೇಕು. ಮಹಿಳಾ ಅತಿಥಿ ಶಿಕ್ಷಕಿಯರಿಗೆ ವೇತನ ಸಹಿತ ಹೆರಿಗೆ ರಜೆ ಸೌಲಭ್ಯ ಕಲ್ಪಿಸುವದು. ಅತಿಥಿ ಶಿಕ್ಷಕರಿಗೆ ೧೨ ತಿಂಗಳುಗಳ ಪೂರ್ಣ ಪ್ರಮಾಣದ ಉದ್ಯೋಗ ಮತ್ತು ವೇತನ ನೀಡಬೇಕು. ಅತಿಥಿ ಶಿಕ್ಷಕ ಎಂಬ ಪದ ಬಳಕೆ ಕೈಬಿಟ್ಟು ಗೌರವ ಶಿಕ್ಷಕ ಎಂದು ನಮೂದಿಸಬೇಕು ಅತಿಥಿ ಶಿಕ್ಷಕ ದುರುಗಪ್ಪ ಅಮರಾವತಿ ಹೇಳಿದರು.
ಪಟ್ಟಣದ ಬಾಲಕರ ಪ್ರೌಡಶಾಲೆಯ ಆವರಣದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ರವರಿಗೆ ಮನವಿ ಸಲ್ಲಿಸಿ ತಾ.ಅತಿಥಿ ದುರುಗಪ್ಪ ಅಮರಾವತಿ ನಾತನಾಡಿ ಅತಿಥಿ ಶಿಕ್ಷಕರಿಗೆ ಶೈಕ್ಷಣಿಕ ತರಬೇತಿಗಳು ಹಾಗೂ ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರನ್ನು ಸೇರ್ಪಡೆಗೊಳಿಸುವದು. ಪ್ರತಿ ವರ್ಷ ರಾಜ್ಯಾದ್ಯಂತ ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಕೊಠಡಿ ಮೇಲ್ವಿಚಾರಕ ಮತ್ತು ಮೌಲ್ಯಮಾಪನ ಕಾರ್ಯಗಳಿಗೆ ನಿಯೋಜಿಸುವದು. ಅತಿಥಿ ಶಿಕ್ಷಕರ ವೇತನವನ್ನು ವಿಳಂಬ ಮಾಡದೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಆಯಾ ಶಾಲೆಗಳಿಂದ ಅತಿಥಿ ಶಿಕ್ಷಕರಿಗೆ ಸೇವಾ ದೃಢಿಕರಣ ಪ್ರಮಾಣ ಪತ್ರ ನೀಡಬೇಕು. ೧ ಖಾಯಂ ಶಿಕ್ಷಕರ ನೇಮಕಾತಿಯಲ್ಲಿ ಅತಿಥಿ ಶಿಕ್ಷಕರ ಕೃಪಾಂಕಗಳನ್ನು ಸಿ.ಇ.ಟಿ ನೇಮಕಾತಿಯಲ್ಲಿ ಪರಿಗಣಿಸಬೇಕು ಎಂದರು ಮನವಿ ಸ್ವಿಕರಿಸಿ ಪರಿಶೀಲಿಸುವುದಾಗಿ ಸಚಿವ ಎನ್.ಎಸ್. ಬೋಸರಾಜು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗೊವಿಂದರಾಜ, ನವಿನ್ ಕುಮಾರ, ಸವಿತಾ, ಭಾಗ್ಯಲಕ್ಷ್ಮೀ, ಮಂಜುಳ, ಅನಿತಾ, ಸೇರಿದಂತೆ ಇನ್ನಿತರರು ಇದ್ದರು.