ಬಸವನಬಾಗೇವಾಡಿ:ಜೂ.16: ಅಖಂಡ ಕನಾಟಕ ರೈತ ಸಂಘಂದ ಕಾರ್ಯಕರ್ತರಿಂದ ಗುರುವಾರ ರೈತರ ಪಂಪಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಹಾಗೂ ರೈತರ ಜಮೀನುಗಳಿಗೆ ಹೋಗಲು ದಾರಿ ಸಮಸ್ಯ ಇಥ್ಯರ್ತ ಪಡಿಸುವಂತೆ ಆಗ್ರಹಿಸಿ ಗ್ರೆಡ್-2 ತಹಶೀಲ್ದಾರ ಜಿ ಎಸ್ ನಾಯಕ ಹಾಗೂ ಹೆಸ್ಕಾಂ ಅಧಿಕಾರಿ ಸಿದ್ದರಾಮ ಬಿರಾದಾರ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಮೆರವಣಿಗೆ ಮೂಲಕ ಹೆಸ್ಕಾ ಕಚೇರಿ ಹಾಗೂ ತಹಶೀಲ್ದಾರ ಕಾರ್ಯಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ ಈಗಾಗಲೇ ಜೂನ್ ತಿಂಗಳು ಅರ್ದ ಕಳೆದರು ಮುಂಗಾರು ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ ತೆರದ ಬಾವಿಯಲ್ಲಿ ಹಾಗೂ ಕೊಳವೆ ಬಾವಿಯಲ್ಲಿರುವ ಅಲ್ಪ ಸ್ವಲ್ಪ ನೀರನ್ನು ಬಳಸಲು ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಈ ನಿಟ್ಟಿನಲ್ಲಿ ರೈತರ ಪಂಪಸೆಟ್‍ಗಳಿಗೆ ಕನಿಷ್ಠ ಎಂಟು ತಾಸು ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆಯನ್ನ ಕುರಿತು ಕೂಡಲೇ ಸರ್ಕಾರ ಅಧಿಸೂಚನೆ ಹೊರಡಿಬೇಕು ಅಖಂಡ ಕರ್ನಾಟಕ ರೈತ ಸಂಘ ನಡೆಸಿದ್ದ ಹೋರಾಟವನ್ನು ಗಣನೆಗೆ ತೆಗೆದುಕೊಂಡಿದ್ದ ಹಿಂದಿನ ಬಿ.ಜೆ.ಪಿ ಸರಕಾರ ಕಳೆದ 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕರೆದಿದ್ದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಕಾನೂನು ಸಚಿವರಾಗಿದ್ದ ಜಿ. ಮಾಧುಸ್ವಾಮಿ ಸಭೆಯಲ್ಲಿ ನಿರ್ಣಯಿಸಿ ಜಮೀನುಗಳ ದಾರಿ ಸಮಸ್ಯೆ ಇತ್ಯರ್ಥ ಪಡಿಸಲು ತಹಶೀಲ್ದಾರರುಗಳಿಗೆ ಅಧಿಕಾರ ನೀಡಲಾಗಿದೆ ಈ ಕುರಿತು ಶೀಘ್ರದಲ್ಲಿ ಕಾನೂನು ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಲಾಗುವದೆಂದು ಸಭೆಯಲ್ಲಿ ಘೋಷಣೆ ಮಾಡಿದ್ದರು ಆದರೆ ಬಿ.ಜೆ.ಪಿ ಸರ್ಕಾರ ಕೊನೆಗೂ ಅಧಿಸೂಚನೆ ಹೊರಡಿಸಲಿಲ್ಲ.
ದಾರಿ ಸಮಸ್ಯೆ ಸಮಸ್ಯೆಯಾಗಿಯೆ ಉಳಿದುಕೊಂಡಿದೆ. ದಾರಿ ಸಮಸ್ಯೆ ರಾಜ್ಯಾದಂತ ಗಂಭೀರವಾಗಿದೆ. ರೈತರ ಮಧ್ಯೆ ದಾರಿಗಾಗಿ ಇನ್ನು ಹೊಡೆದಾಟಗಳು ನಡೆಯುತ್ತಲೆ ಇವೆ. ಸದ್ಯಕ್ಕೆ ದಾರಿ ಸಮಸ್ಯೆ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ದಾರಿ ಸಮಸ್ಯೆಯನ್ನು ಗಂಭೀüರವಾಗಿ ಪರಿಗಣಿಸಿ ಕಾನೂನು ತಿದ್ದುಪಡಿ ಮಾಡಿ ಅನುಭೋಗದ ಹಕ್ಕಿನಡಿ ಪುನಃ ತಹಶೀಲ್ದಾರರಿಗೆ ಅಧಿಕಾರ ನೀಡಿ ಅಧಿಸೂಚನೆ ಹೊರಡಿಸಿ ದಾರಿ ಸಮಸ್ಯೆ ಕೊನೆಗಾಣಿಸಬೇಕೆಂದು ಅವರು ಆಗ್ರಹಿಸಿದರು.
ರೈತ ಸಂಘದ ಕಾರ್ಯಕರ್ತರಾದ ಚನ್ನಬಸಪ್ಪ ಸಿಂದೂರ, ಶಿವಪ್ಪ ಸುಂಟ್ಯಾಣ, ಬಸಪ್ಪ ಮಾಡ್ಯಾಳ, ಗುರಣ್ಣ ರೂಗಿ, ಪರಸು ನಾಯೋಡಿ, ದಾವಲಸಾಬ ನದಾಫ, ಬಸಪ್ಪ ದೊಡಮನಿ, ಹಣಮಂತ ಮದಗಿನಾಳ, ಬಸಗೊಂಡಪ್ಪ ಕೀರಸಾವಳಗಿ, ಬಸನಗೌಡ ಬಿರಾದಾರ, ಸಂಗಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಡಮನಿ, ಬಸಪ್ಪ ದೊಡಮನಿ, ಲಾಲಪ್ಪಾ ದೊಡಮನಿ, ಭೀಮಪ್ಪ ಸುಂಟ್ಯಾಣ, ಹಣಮಂತರಾಯ ಬಿರಾದಾರ, ಗುರಪ್ಪ ದಳವಾಯಿ, ವಿಜಯ ಬಿರಾದಾರ, ಬಸವರಾಜ ಸೂಂಟ್ಯಾಣ, ಮಹೇಶ ದಿನ್ನಿ, ಲಚ್ಚಪ್ಪ ಮಾದರ, ಶರಣಪ್ಪ ಹೂಗಾರ, ಹಣಮಂತ ಮುರಾಳ, ಸೇರಿದಂತೆ ಮುಂತಾದವರು ಇದ್ದರು.