ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ರೈತರ ಪ್ರತಿಭಟನೆ

ಶಹಾಪುರ :ಜ.11: ವಡಗೆರಾ ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ನೀಲ ಹಳ್ಳಿ.ನೇತೃತ್ವದಲ್ಲಿ ಇಂದು ಹಮ್ಮಿಕೊಂಡಿದ್ದ ರೈತರ ವಿವಿಧ ಬೇಡಿಕೆಗಳ ಕುರಿತು ನಡೆದ ಪ್ರತಿಭಟನಾ ಮೆರವಣಿಗೆಯು ಹಳೆಯ ಪೆÇಲೀಸ್ ಠಾಣೆಯಿಂದ ವಾಲ್ಮೀಕಿ ವೃತ್ತದ ವರೆಗೆ ಆಗಮಿಸಿತು ಈ ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಸತ್ಯಂಪೇಟೆ ರವರು ಮಾತನಾಡಿದರು.
ಈ ವರ್ಷವೂ ಅತಿವೃಷ್ಟಿಯಿಂದ ಹತ್ತಿ ತೊಗರಿ ಬೆಳೆಗಳ ಇಳುವರಿ ಕಡಿಮೆ ಬಂದಿದ್ದು ರೈತರು ತೀವ್ರ ಕಂಗಲಾಗಿದ್ದಾರೆ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಪ್ರತಿ ಕ್ವಿಂಟಲ್ ಹತ್ತಿಗೆ 12,000 ನಿಗದಿಪಡಿಸಬೇಕು ಮತ್ತು ಪ್ರತಿ ಕ್ವಿಂಟಲ್ ತೊಗರಿಗೆ 10,000 ದರ ನಿಗದಿ ಮಾಡಬೇಕು ಕಳಪೆ ಬೀಜ ಗೊಬ್ಬರಗಳ ಸರಬರಾಜನ್ನು ಸರಕಾರ ತಡೆಯಬೇಕು ಎಂದು ಹೇಳಿದರು. ರೈತ ಸಂಘದ ರಾಜ್ಯ ಮಹಿಳಾ ಘಟಕ ಅಧ್ಯಕ್ಷರಾದ ನಾಗರತ್ನ .ವಿ .ಪಾಟೀಲ್ ತಾಲೂಕಾಗಿ ತುಂಬಾ ವರ್ಷಗಳು ಕಳೆದರೂ ಕೂಡ ಯಾವುದೇ ರೀತಿಯಾದ ಮೂಲಸೌಕರ್ಯಗಳಿಲ್ಲ ತಾಲೂಕಿಗೆ ಸಂಬಂಧಪಟ್ಟಂತ ಕಚೇರಿಗಳನ್ನು ಇಲ್ಲಿವರೆಗೆ ಕೂಡ ಸ್ಥಾಪಿಸದೆ ವಿಳಂಬ ಮಾಡುತ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ತಾಲೂಕಾಧ್ಯಂತ ಎಲ್ಲೆಂದರಲ್ಲಿ ಹೋಟೆಲ್ ಕಿರಣ್ ಅಂಗಡಿಗಳಲ್ಲಿ ಮದ್ಯ ಸಿಗುತ್ತಿದೆ ಇದನ್ನು ತಡಿಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ರಸ್ತೆಗಳು ಹದಗೆಟ್ಟು ಪ್ರಯಾಣಕ್ಕೆ ತೊಂದರೆಯಾಗುತ್ತಿದೆ ಕೂಡಲೇ ತಾಲೂಕಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ಮತ್ತು ತಾಲೂಕ ಕಚೇರಿಗಳನ್ನು ಸ್ಥಾಪಿಸಬೇಕು ಮಿನಿ ವಿಧಾನಸೌಧ ಕೋರ್ಟ್ ಕಟ್ಟಡ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು . ಈ ಮನವಿ ಪತ್ರವನ್ನು ವಡಗೇರಾ ತಾಲೂಕು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ. ರೈತ ಸಂಘದ ಜಿಲ್ಲಾಧ್ಯಕ್ಷರಾದ ಶರಣು ಮಂದಾರವಾಡ. ಮಹಿಳಾ ಜಿಲ್ಲಾಧ್ಯಕ್ಷರಾದ ಚಂದ್ರಕಲಾ ಬಾಗೂರು. ಹಿರಿಯ ರೈತ ಮುಖಂಡರಾದ ಹಿರಿಯ ರೈತ ಮುಖಂಡರಾದ ಶರಣಪ್ಪ ಸಲಾದಪುರ. ಶಿಕ್ಷಣ ಪ್ರೇಮಿ ಡಾ. ಭೀಮಣ್ಣ ಮೇಟಿ. ಯುವ ಮುಖಂಡರಾದ ಬಸವರಾಜ ಸೊನ್ನ ದ. ಮರಲಿಂಗಪ್ಪ ಕುಮನೂರ. ಶಾಂತಪ್ಪ ಗೊಂದೇನೂರ. ಶಿವಲಿಂಗಪ್ಪ ಪಿಡ್ಡೆ ಗೌಡ . ಭೀಮಣ್ಣ ಜಡಿ. ದೇವೇಂದ್ರಪ್ಪ ಕಡೆಚೂರ.ರೈತ ಮುಖಂಡರುಗಳಾದ ನಿಂಗಣ್ಣ ಜಡಿ. ಫಕೀರ್ ಅಹ್ಮದ್ ಮರಡಿ. ಕುಮಾರ ತುಮಕೂರ. ಭೀಮರಾಯ ಹಾಲಗೇರಾ. ಅಯ್ಯಪ್ಪ ದೊರೆ. ಮಲ್ಲಣ್ಣ. ವೆಂಕಟರಾಯ ಗೊಂದೆನೂರ. ಮಾದೇವಪ್ಪ . ಅಯ್ಯಪ್ಪ ಅಂಚಿನಾಳ. ಮಲ್ಲಿಕಾರ್ಜುನ. ಅಯ್ಯಳಪ್ಪ ಪೂಜಾರಿ. ರೈತ ಸಂಘದ ತಾಲೂಕು ಪದಾಧಿಕಾರಿಗಳು ಸುತ್ತಮುತ್ತಲ ಗ್ರಾಮದ ರೈತರು ಉಪಸ್ಥಿತರಿದ್ದರು.