ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಧರಣಿ

ವಿಜಯಪುರ, ಜು.23-ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ಅಂಚೇ ಅಧೀಕ್ಷಕರ ಕಛೇರಿ ವಿಜಯಪುರ ವಿಭಾಗದ ಎದುರು ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.
ತದ ನಂತರ ಅಂಚೇ ಅಧೀಕ್ಷಕರು ವಿಜಯಪುರ ಇವರ ಮೂಲಕ ನವದೆಹಲಿ ಅಂಚೆ ಇಲಾಖೆಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಖಜಾಂಚಿ ವಿಠ್ಠಲಸಿಂಗ ರಜಪೂತ ಮಾತನಾಡಿ, ಇಲಾಖೆಯನ್ನು ಖಾಸಗೀಕರಣಗೊಳಿಸಲು ಈಗಾಗಲೇ ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿರುವುದು ತಮ್ಮೆಲ್ಲರಿಗೂ ತಿಳಿದಿದೆ. ಇದಕ್ಕಾಗಿ ಎಲ್ಲಾ ಅಂಚೆ ಸಂಘಟನೆಗಳು ಒಟ್ಟಾಗಿ ಹೋರಾಟಕ್ಕೆ ಮುಂದಾಗಿವೆ. ಈ ಹೋರಾಟದಲ್ಲಿ ಇಲಾಖೆಯ ಉಳಿವಿಗಾಗಿ ನಮ್ಮ ಂIಉಆSU ಸಂಘಟನೆಯು ಭಾಗವಹಿಸಲು ನಿರ್ಧರಿಸಲಾಗಿದೆ. ಮತ್ತು ನಮ್ಮ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ ನಮ್ಮ ಂIಉಆSU ಕೇಂದ್ರ ಸಂಘಟನೆ ಕೇಂದ್ರ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ಹಲವು ಹೋರಾಟಗಳನ್ನು ನಿರ್ಧರಿಸಿದ್ದು. ಶ್ರೀ ಕಮಲೇಶ ಚಂದ್ರ ವರದಿಯ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ನಾವು ಈಗ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀ ಗುರು ಬೆಳ್ಳುಬ್ಬಿ ಮಾತನಾಡಿ, ನಮ್ಮ ಹಿರಿಯ ಉಆS ನೌಕರರಿಗೆ ಸಿಗಬೇಕಾದ 12,24,36, ರ ಫೈಲ್ ಹಣಕಾಸು ಇಲಾಖೆಯಿಂದ ತಿರಸ್ಕರಿಸಿ ಹಿಂದಕ್ಕೆ ಕಳುಸಿದ್ದು, ಕೇಂದ್ರ ಸಂಘಟನೆ ಮನವಿ ಮಾಡಿದ್ದು ಮತ್ತೆ ಸಕಾರಾತ್ಮಕವಾಗಿ ವಿತ್ತ ಸಚಿವಾಲಯಕ್ಕೆ ಕಳುಹಿಸುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ನಾವು ಈಗ ಹೋರಾಟ ಮಾಡದಿದ್ದರೆ ಖಂಡಿತ ಸರ್ಕಾರ ನಮಗೆ ಅನ್ಯಾಯ ಮಾಡುತ್ತದೆ. ಆಲೋಚಿಸಿ ನಿರ್ಧರಿಸಿ, ಹೋರಾಟದ ಭಾಗವಾಗಿ. ವಿಭಾಗ/ಶಾಖೆ ಕಾರ್ಯದರ್ಶಿಗಳು 22ನೇ ಜುಲೈ 2022 ರಂದು ವಿಭಾಗೀಯಕಛೇರಿಯಲ್ಲಿ ಒಂದು ದಿನದ ಧರಣಿಯನ್ನು ಯಶಸ್ವಿಗೊಳಿಸಲು ವಿನಂತಿಸಲಾಗಿದೆ. ಪೆÇೀಸ್ಟ್ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಕಳುಹಿಸಲಾದ ಜ್ಞಾಪಕ ಪತ್ರವನ್ನು ನಿಮ್ಮ ಲೆಟರ್‍ಹೆಡ್‍ನಲ್ಲಿ ಎಸ್‍ಪಿ/ಎಸ್‍ಎಸ್‍ಪಿಒಗಳು, ಸಿಪಿಎಂಜಿ, ಸಂವಹನ ಸಚಿವರು ಮತ್ತು ನಿಮ್ಮ ಸ್ಥಳೀಯ ಸಂಸದರಿಗೆ ರವಾನಿಸಬೇಕು. ನಮ್ಮ ಸಮಸ್ಯೆಯನ್ನು ಅವರಿಗೆ ವಿವರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರಾದ ಎಸ್.ಆರ್.ನರಳೆ ಮಾತನಾಡಿ, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ಗೊಳಿಸುವುದು. ಅಂಚೆ ಸೇವೆಗಳ ಖಾಸಗೀಕರಣ – ನಿಲ್ಲಿಸಲು ಕರೆ. ಸಮಯ ಬದ್ಧವಾದ ಮೂರು ಆರ್ಥಿಕ ಉನ್ನತೀಕರಣದ ತಕ್ಷಣದ ಅನುದಾನ.(12,24,36) ಉಆS ಸಮಿತಿಯು ಶಿಫಾರಸು ಮಾಡಿದ ಮೊತ್ತಕ್ಕೆ ಉಆS ಗ್ರಾಚ್ಯುಟಿ ಮೊತ್ತವನ್ನು ಕೊಡುವುದು. ಉಆS ನೌಕರರು ಮತ್ತು ಅವರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯದ ಅನುದಾನ. ನಿವೃತ್ತಿಯ ರಜೆಯಲ್ಲಿ 180 ದಿನಗಳವರೆಗೆ ಎನ್‍ಕ್ಯಾಶ್ ಮಾಡಬಹುದಾದ ಶೇಖರಣೆಯ ಸೌಲಭ್ಯದೊಂದಿಗೆ ವಾರ್ಷಿಕ 30 ದಿನಗಳ ರಜೆಯ ಅನುದಾನ. SಆಃS ನಿಧಿಗೆ ಕೊಡುಗೆಯನ್ನು ಸಂಗ್ರಹಿಸುವುದು. ಗುಂಪು ವಿಮೆಯ ಮೊತ್ತವನ್ನು ರೂ 5 ಲಕ್ಷಗಳಿಗೆ ಹೆಚ್ಚಿಸುವುದು. ಶಾಖಾ ಅಂಚೆ ಕಚೇರಿಗಳಿಗೆ ಅಪ್ರಾಯೋಗಿಕ ಮತ್ತು ಅನ್ಯಾಯದ ಗುರಿಗಳನ್ನು ನಿಲ್ಲಿಸುವುದು.
ಅವೈಜ್ಞಾನಿಕ ಟಾರ್ಗೆಟ್ ನೀಡುವ ಮೂಲಕ ಕಿರುಕುಳ ನೀಡುವುದನ್ನು ನಿಲ್ಲಿಸುವುದು. ಅಆಂ ಆದೇಶ ಬಂದಿದ್ದು, ಎಮರ್ಜೆನ್ಸಿ ರಜೆಯ ಆದೇಶ ಬಂದಿದ್ದು, ಮಕ್ಕಳ ಶಿಕ್ಷಣ ಭತ್ಯೆಯ ಆದೇಶ, ಹೆರಿಗೆ ರಜೆಯ ಆದೇಶ ಇನ್ನೂ ಹಲವು ಅದೇಶಗಳು ಹೋರಾಟ ಮಾಡದಿದ್ದರೆ ಬರುತ್ತಿದ್ದವೇ….? ನಿಮ್ಮ ಮನಸ್ಸಿಗೆ ನೀವೇ ಪ್ರಶ್ನೆಮಾಡಿಕೊಳ್ಳಿ. ಈ ಹೋರಾಟದ ಅನಿವಾರ್ಯತೆ, ತೀವ್ರತೆ, ಅವಶ್ಯಕತೆ ನಿಮಗೆ ಅರ್ಥವಾಗುತ್ತದೆ. ಎಲ್ಲರೂ ಈ ಹೋರಾಟದಲ್ಲಿ ಪಾಲ್ಗೊಂಡು ಈ ಹೋರಾಟಗಳನ್ನು ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಿ.ಎನ್.ಬಿರಾದಾರ, ಸಾಯಿ ಪಾಟೀಲ, ಪಿ.ಎಂ.ನಾಯ್ಕೋಡಿ, ಐ.ಸಿ. ಹಂಚಿನಾಳ, ಪಿ.ವಿ.ಪಾಟೀಲ, ಸಹಕಾರ್ಯದರ್ಶಿ ಓಂಕಾರ ಕೆ.ಎಸ್., ಎಸ್.ಆರ್.ಮೋರೆ, ಎಸ್.ವೈ. ತೋರತ, ಎಸ್.ಎಂ.ಹಿರೇಮಠ, ಮಹಾದೇವ ಚಿಪ್ಪರಕಟ್ಟಿ, ಆರ್.ಜಿ.ಕಂಬಾರ, ಚನ್ನು ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.