ವಿವಿಧ ಬಣಗಳಾಗಿರುವ ದಲಿತ ಸಂಘರ್ಷ ಸಮಿತಿಯನ್ನು ಒಗ್ಗೂಡಿಸಿ

ಪಿರಿಯಾಪಟ್ಟಣ: ಜ.10: ದಲಿತ ಚಳುವಳಿಯ ವಿಘಟನೆಯೇ ಮತೀಯ ವಾದಿ ರಾಜಕಾರಣಕ್ಕೆ ಬುನಾದಿಯಾಗಿದೆ ಎಂದು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರಾದ ಪ್ರೋ ಎಚ್.ಗೋವಿಂದಯ್ಯ ಅಸಮಾದಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೊಪ್ಪ ಗ್ರಾಮದ ಡೋಂಗ್ರಿ ಗೇರಾಸಿಯಾ ಕಾಲೋನಿಯಲ್ಲಿ ದಲಿತ ಸಂಘರ್ಷ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಬಣಗಳಾಗಿ ದಲಿತರು ಹೈರಾಣಗಿದ್ದು ಸಾಕು, ಒಂದೇ ದಲಿತ ಸಂಘರ್ಷ ಸಮಿತಿ ಬೇಕು ಎಂಬ ಎರಡು ದಿನದ ಶಿಬರದಲ್ಲಿ ಭಾಗವಹಿಸಿ ಮಾತನಾಡಿದರು.
ದಲಿತ ಚಳುವಳಿಗೆ ತನ್ನದೆ ಐತಿಹಾಸಿಕವಾದ ಹಿನ್ನೆಲೆಯಿದ್ದು,ಪ್ರಸ್ತುತ ದಿನಗಳಲ್ಲಿ ಇದರ ಏಕ ಮುಖವಾದ ಸಂಘಟನೆಯ ಅನಿವಾರ್ಯವನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗಿದೆ.ದಲಿತ ಚಳುವಳಿಯೂ ಪ್ರಾರಂಭದ ದಿನಗಳಲ್ಲಿ ತನ್ನ ಸ್ವಾರ್ಥ ರಹಿತವಾದ ಮತ್ತು ಒಗ್ಗಟಿನ ಹೋರಾಟಗಳ ಮೂಲಕ ಶೋಷಿತರಿಗೆ ನ್ಯಾಯ ಕೊಡಿಸುತ್ತ ಸುವರ್ಣಕಾಲವಾಗಿತು ಇತ್ತಿಚಿನ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯು ಅನೇಕ ಬಣಗಳಾಗಿ ವಿಘಟನೆಯಾಗಿ ಕರಾಳ ದಿನಗಳಾಗಿ ಬದಲಾಗಿದೆ ಇದು ನೋವಿನ ಸಂಗತಿಯಾಗಿದೆ.
ಜನ್ಮ ನೀಡಿದ ತಂದೆ ತಾಯಿಯನ್ನು ಮತ್ತು ಸಂಘಟನೆಯನ್ನು ಒಂದೆ ತಕಡ್ಡಿಯಲ್ಲಿ ತೂಗಿದರೆ ಸಂಘಟನೆಯು ಹೆಚ್ಚಿನ ತೂಕವನ್ನು ತೂಗುತ್ತದೆ ಅಷ್ಟು ಶಕ್ತಿಯನ್ನು ದಸಂಸ ಹೊಂದಿದೆ.ವಿಶ್ವ ಮಾನವತ್ವವನ್ನು ದಲಿತ ಚಳುವಳಿಯು ತೋರಿಸಿಕೊಡುತ್ತದೆ.ಆದರೆ ಇಂದಿನ ವಿಘಟನೆಯ ದಲಿತ ಚಳುವಳಿಯಿಂದಾಗಿ ಯಾರೊಬ್ಬರೂ ಕೂಡ ಏಕತೆಯನ್ನು ಹೊಂದಲು ಸಾಧ್ಯವಾಗುತ್ತಿಲ್ಲ ಅಲ್ಲದೆ ನೆಮ್ಮದಿಯ ಜೀವನವನ್ನು ಸಾಧಿಸಲು ಆಗದೆ ಮತೀಯವಾದಿಗಳ ಜನ ವಿರೋಧಿ ಆಡಳಿತಕ್ಕೆ ಜನ ಸಾಮಾನ್ಯರು ತುತ್ತಾಗಿದ್ದಾರೆ ಇದನ್ನು ಪ್ರತಿಯೊಬ್ಬರೂ ಅರ್ಥಯಿಸಿಕೊಳ್ಳಬೇಕು.
ಆದರಿಂದ್ದ ವಿವಿಧ ಬಣಗಳಾಗಿರುವ ದಲಿತ ಸಂಘರ್ಷ ಸಮಿತಿಯನ್ನು ಒಗ್ಗೂಡಿಸುವುದರ ಮೂಲಕ ಒಂದೆ ಸಂಘಟನೆಯನ್ನಾಗಿಸಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಬೇಕಾಗಿದೆ.ಈ ಮಹತ್ಕಾರ್ಯಕ್ಕೆ ಚಳುವಳಿಗಾರರು ಸಹಕಾರ ನೀಡಿ ಶ್ರಮಿಸಬೇಕು ಎಂದರು.
ಹಿರಿಯ ದಲಿತ ಚಳುವಳಿಗಾರ ತುಮಕೂರಿನ ಕೆ.ದೊರೈರಾಜ್ ಮಾತನಾಡಿ ಒಂದೇ ದಲಿತ ಸಂಘರ್ಷ ಸಮಿತಿಯ ಬೇಕು ಕೂಗು ವರ್ತಮಾನದ ಕೂಗಾಗಬೇಕು.ಸಂವಿಧಾನ ವಿರೋಧಿಗಳ ಕೈಯಲ್ಲಿ ಇಂದು ಆಡಳಿತವಿದ್ದು ಇವರು ಸರ್ವಾಧಿಕಾರವನ್ನು ನಡೆಸುತ್ತಿದ್ದಾರೆ.ಈ ವ್ಯವಸ್ಥೆಯ ವಿರುದ್ದ ಹೋರಾಡುವ ಅನಿವಾರ್ಯತೆ ಎದುರಾಗಿದೆ.ಈ ಕಾರಣಕ್ಕಾಗಿ ಛಿದ್ರಕರಣಗೊಂಡಿರುವ ಮತ್ತು ವಿಘಟನೆಗೊಂಡಿರುವ ದಲಿತ ಚಳವಳಿ ಬಣಗಳು ಜಾತ್ಯಾತೀತವಾಗಿ,ವ್ಯೆಕ್ತಿ ಕೇಂದ್ರದಿಂದಾಗಿ ಹೊರಬಂದು ಒಗ್ಗೂಡಬೇಕು ಈ ಅನಿಷ್ಟ ಅವ್ಯವಸ್ಥೆಯ ವಿರುಧ್ದ ಸಮರ ಸಾರಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಅಲೆಮಾರಿ ಸಮುದಾಯದ ದಲಿತ ಚಳುವಳಿಗಾರ ಧರ್ಮರವರು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಚಾಲಕ ಹರಿಹರ ಆನಂದ ಸ್ವಾಮಿವಹಿಸಿದ್ದರು.ಹಿರಿಯ ಹೋರಾಟಗಾರ ಪ್ರೋ.ಬಿ.ಎಸ್.ಚಂದ್ರಶೇಖರ್ ಮಾತನಾಡಿದರು.
ಈ ಸಂದರ್ಭದಲ್ಲಿ ಡೀಡ್ ಸಂಸ್ಥೆ ಮುಖ್ಯಸ್ಥ ಡಾ.ಎಸ್.ಶ್ರೀಕಂತ್,ಕೆ.ಎಂ.ಕೊಮ್ಮಣ,ಡಿ.ಭರತ್ ಕುಮಾರ್ ತುಮಕೂರು,ಬೋಗಾದಿ ನಾಗರಾಜ್, ಸಂಬಯ್ಯ, ಸಾಹಿತಿ ಹುರಿಗಾಲವಾಡಿ ರಾಮಯ್ಯ, ತಾಪಂ ಸದಸ್ಯ ಟಿ.ಈರಯ್ಯ, ದಲಿತ ಮುಖಂಡರಾದ ಕೃಷ್ಣಯ್ಯ, ಹುಣಸೂರು ಕುಮರ್, ನಿಂಗರಾಜ್ ಮಲ್ಲಾಡಿ, ಸಿ.ಎಸ್.ಜಗದೀಶ್, ಅಣ್ಣಯ್ಯ, ಎಚ್.ಡಿ.ರಮೇಶ್, ಆರ್ಟಿಸ್ಟ್ ನಾಗರಾಜು, ಆವರ್ತಿ ಸೋಮಶೇಖರ್, ಕೆ.ಬಿ.ಮೂರ್ತಿ, ಪಿ.ಮಾದೇವ್, ಬಾಳೆಕಟ್ಟೆ ರಾಜಯ್ಯ, ಕೆ.ಆರ್.ರಾಜಣ್ಣ, ಪಿ.ಪಿ.ಮಹದೇವ್, ಆರ್.ಡಿ.ಮಾದೇವ್, ಬಸಪ್ಪ ಲಿಂಗಾಪುರ, ನಾರಾಯಣ ಕೊಪ್ಪ ಸೇರಿದಂತ್ತೆ ಹಲವಾ ಮಂದಿ ಹಾಜರಿದ್ದರು.