ವಿವಿಧ ಪ್ರದೇಶಗಳಲ್ಲಿ ಮೇಯರ್ ಸಂಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.24: ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 34 ರ ಪ್ರದೇಶದ ವಡ್ಡೆ ನಾಗಪ್ಪ ಕಾಲೋನಿ, ರೆಹಮಬಾದ್ ಕಾಲೋನಿ, ತಿಲಕ್ ನಗರ ಹಾಗು ಇನ್ನು ಇತರೆ ಪ್ರದೇಶಗಳಲ್ಲಿ ಸಂಚರಿಸಿದ ಮೇಯರ್ ಎಂ. ರಾಜೇಶ್ವರಿ ಸುಬ್ಬರಾಯಡು ಅವರು ಒಳಚರಂಡಿ ಸಮಸ್ಯೆ, ರಸ್ತೆ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳನ್ನು ಪರಿಶೀಲನೆ ಮಾಡಿದರು.ವಾರ್ಡಿನ ಸಮಸ್ಯೆಗಳನ್ನು ತ್ವರಿತವಾಗಿ  ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸದರು
ಈ ಸಂದರ್ಭದಲ್ಲಿ ಪಾಲಿಕೆ  ಆಯುಕ್ತ ರುದ್ರೇಶ್, ಕಾರ್ಯಪಾಲಕ ಅಭಿಯಂತರರು,  ಸಹಾಯಕ ಕಾರ್ಯ ಪಾಲಕ ಅಭಿಯಂತರರು ಮತ್ತು ಪರಿಸರ ಅಭಿಯಂತರರು  ಹಾಜರಿದ್ದರು.