ವಿವಿಧ ಪ್ರಕಾರದ ಸಾಹಿತ್ಯ ರಚನೆ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡ ಕವಿ ಮಿರ್ಜಾ ಗಾಲಿಬ್

ರಾಯಚೂರು,ಡಿ.೧೭- ಮಿರ್ಜಾ ಗಾಲಿಬ್ ಅವರು ಉರ್ದು ಸಾಹಿತ್ಯ ಹಾಗೂ ಭಾರತೀಯ ಸಾಹಿತಿಗಳಲ್ಲಿ ಮೇರು ವ್ಯಕ್ತಿತ್ವ, ಗಜಲ್, ರೂಪಕ್, ಇತರೆ ಪ್ರಕಾರದ ಸಾಹಿತ್ಯ ರಚನೆ ಮಾಡಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ ಎಂದು ಉಪನ್ಯಾಸಕ ಹಾಗೂ ಸಾಹಿತಿ ದಸ್ತಗಿರಿಸಾಬ್ ದಿನ್ನಿ ಹೇಳಿದರು.
ಅವರಿಂದು ಲೋಹಿಯ ಪ್ರತಿಷ್ಠಾನ, ಸುರಭಿ ಸಾಂಸ್ಕೃತಿಕ ಬಳಗ ಸಂಸ್ಥೆ ವತಿಯಿಂದ ಆಯೋಜಿಸಲಾದ ಶ್ರೇಷ್ಠ ಗಜಲ್ ಕವಿ ಮಿರ್ಜಾ ಗಾಲಿಬ್ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್ ಅವರ
ಗಜಲ್ ಗಳಲ್ಲಿ ವಿರಹ, ಪ್ರೀತಿ ಪ್ರೇಮ, ಚಂಚಲತೆ, ಆತ್ಮೀಯತೆ, ದುಗುಡ, ಚಡಪಡಿಕೆ ಇತರೆ ಮಾನಸಿಕ ತೊಳಲಾಟಗಳು ಕಾಣಬಹುದು. ಐಷಾರಾಮಿ, ಕುಡಿತದ ಚಟಕ್ಕೆ ದಾಸರಾಗಿದ್ದ ಎಂಬ ಆರೋಪವಿದ್ದರೂಕೂಡ ಸಾಹಿತ್ಯದಲ್ಲಿ ವಿಶಿಷ್ಟ ಸಾಹಿತ್ಯ ಪಾಂಡಿತ್ಯ ಹೊಂದಿದ್ದ ಅವರು ತನ್ನ ಖಾಸಗಿ ಜೀವನದಲ್ಲಿ ಸಂಕಷ್ಟ ಅನುಭವಿಸಿದರೂಕೂಡ ಅಧ್ಯಾಯನ, ಓದು ಬಿಡದೇ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಉರ್ದು ಸಾಹಿತ್ಯದ ಸಾಕ್ಷಿ ಪ್ರಜ್ಞೆ ಯಾಗಿದ್ದಾನೆ. ತನ್ನ ಹಟಮಾರಿ ವ್ಯಕ್ತಿತ್ವದಿಂದ ಗಜಲ್ ಸಾಹಿತ್ಯದಲ್ಲಿ ಹೆಸರು ಮಾಡಿದರು. ಇಂದಿಗೂ ಅವರ ಗಜಲ್ ಪ್ರೇರಣೆಯಾಗಿದೆ. ಅವರ ಗಜಲ್ ಕನ್ನಡದಲ್ಲಿ ಅನುವಾದ ಮಾಡಿದರೆ ಕನ್ನಡಿಗರಿಗೆ ಅನುಕೂಲವಾಗಲಿದೆ ಎಂದರು.
ಉರ್ದು ಸಾಹಿತ್ಯ ಅಭಿಮಾನಿ ಸಿದ್ದಪ್ಪ ಇತ್ಲಿ ಅವರು ಮಾತನಾಡಿ, ಮಿರ್ಜಾ ಗಾಲಿಬ್ ಅವರು ಮೇರು ವ್ಯಕ್ತಿತ್ವ ಹೊಂದಿದ ವ್ಯಕ್ತಿ. ಚಿಕ್ಕಂದಿನದಲೇ ಅವರ ಅಭಿಮಾನಿ, ಅವರ ಅನೇಕ ಗಜಲ್ ಗಳು ಹಿಂದಿ ಸಿನಿಮಾ ರಂಗದ ಪ್ರಸಿದ್ದ ಗಾಯಕರು ಹಾಡಿ ಮನೆ ಮಾತಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಭೀಮನಗೌಡಇಟಗಿ, ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷೆ ಕೆ.ಗಿರಿಜಾ ರಾಜಶೇಖರ, ಸುರಭಿ ಸಾಹಿತ್ಯ ಬಳಗದ ಆಧ್ಯಕ್ಷ ಜಿ.ಸುರೇಶ, ಉರ್ದು ಸಾಹಿತಿ ಇರ್ಫಾನ್ , ವೀರ ಹನುಮಾನ್ ಮತ್ತಿತರರು ಇದ್ದರು.
ಉರ್ದು ಸಾಹಿತಿ ಜನಾಬ್ ವಾಹಿದ್ ವಾಜಿದ್ ಮಿರ್ಜ ಗಾಲಿಬ್ ಅವರ ಗಜಲ್, ಶಾಯಿರಿಗಳ ಬಗ್ಗೆ ವಿವರಿಸಿದರು.