ವಿವಿಧ ಪ್ರಕರಣಗಳಲ್ಲಿ 51.34 ಲೀ.ಮದ್ಯ ವಶ

ಗದಗ, ಏ.8: ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏಪ್ರೀಲ್ 6 ರ ಬೆಳಗ್ಗೆ 9 ರಿಂದ ಎಪ್ರಿಲ 7 ರ ಬೆಳಗ್ಗೆ 9 ಗಂಟೆಯ ವರೆಗೆ ಪೆÇೀಲಿಸ್ ಹಾಗೂ ಅಬಕಾರಿ ತಂಡಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಅಂದಾಜು 21,049 ರೂ ಮೌಲ್ಯದ 51.34 ಲೀ ಮದ್ಯವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.
ಮೇ. 6 ರಂದು ನರಗುಂದ ಕೆ.ಎಸ್.ಆರ್.ಟಿ.ಸಿ ಡಿಪೆÇೀ ಹತ್ತಿರ ಅಬಕಾರಿ ಇಲಾಖೆ ವತಿಯಿಂದ ಕುರ್ಲಗೇರಿ ಗ್ರಾಮ ಹುಚ್ಚಪ್ಪ ಚಲವಾದಿ ಅವರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 3372 ರೂ. ಮೌಲ್ಯದ 8.64 ಲೀ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ವಾಹನ ಹಾಗೂ ಸವಾರನನ್ನು ವಶಕ್ಕೆ ಪಡೆಯಲಾಗಿದೆ.
ಮೇ.6 ರಂದು ದುಂದೂರ ಚೆಕ್ ಪೆÇೀಸ್ಟ ಹತ್ತಿರ ಹುಬ್ಬಳ್ಳಿ ಕಡೆಯಿಂದ ಬಂದಂತಹ ಸಾರಿಗೆ ಸಂಸ್ಥೆ ಬಸನಲ್ಲಿ ಪ್ರಯಾಣಿಸುತ್ತಿದ್ದ ಅಂತೂರ-ಬೆಂತೂರ ಗ್ರಾಮದ ಯಲ್ಲಪ್ಪ.ಪ.ಬಂಗಾರಿ ಅವರಿಂದ 3150 ರೂ. ಮೌಲ್ಯದ 7.380 ಲೀ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಗಜೇಂದ್ರಗಡ ಪಟ್ಟಣದಲ್ಲಿ ಗಸ್ತು ನಿರ್ವಹಿಸುವಾಗ ನಾಗರಸಿಕೊಪ್ಪ ಕ್ರಾಸ ಹತ್ತಿರ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಲ್ಲಪ್ಪ.ವಿ.ತೋಟದ ಇವರು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 7104 ರೂ. ಮೌಲ್ಯದ 17.28 ಲೀ ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.