ವಿವಿಧ ನರೇಗಾ ಕಾಮಗಾರಿ ವೀಕ್ಷಿಸಿದ ಜಿಪಂನ ಡಿಎಸ್ ಭೀಮಪ್ಪ ಲಾಳಿ


ಸಂಜೆವಾಣಿ ವಾರ್ತೆ
ಹರಪನಹಳ್ಳಿ:ಅ,2- ತಾಲೂಕಿನ ನೀಲಗುಂದ, ಗುಂಡುಗತ್ತಿ, ಕಂಚಿಕೆರೆ, ಅರಸೀಕೆರೆ ಹಾಗೂ ತೌಡೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನರೇಗಾದಡಿ ಹಮ್ಮಿಕೊಂಡಿರುವ ಕಾಮಗಾರಿಗಳ ಸ್ಥಳಕ್ಕೆ ಮಾನ್ಯ ಜಿಪಂನ ಉಪ ಕಾರ್ಯದರ್ಶಿಗಳಾದ ಭೀಮಪ್ಪ ಲಾಳಿ ಅವರು ಮಂಗಳವಾರ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಬಳಿಕ ಗ್ರಾಪಂಗಳಿಗೆ ಭೇಟಿ ನೀಡಿದ ಅವರು ನರೇಗಾ ಕಾಮಗಾರಿ ಕಡತಗಳನ್ನು ಪರಿಶೀಲಿಸಿದರು. ಬಳಿಕ ತಾಪಂನ ಸಾಮರ್ಥ್ಯ ಸೌಧದಲ್ಲಿ ಪಿಡಿಒ, ಟಿಎಇಗಳು ಹಾಗೂ ತಾಪಂನ ನರೇಗಾ ಸಿಬ್ಬಂದಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಆರ್.ಪ್ರಕಾಶ್‌, ಸಹಾಯಕ ನಿರ್ದೇಶಕ(ಗ್ರಾ.ಉ.) ರಾದ ಯು.ಎಚ್.ಸೋಮಶೇಖರ್‌, ಸಹಾಯಕ ನಿರ್ದೇಶಕ (ಪಂ.ರಾಜ್)‌ ರಾದ ವೀರಣ್ಣ ಲಕ್ಕಣ್ಣನವರ್‌, ಎಡಿಪಿಸಿ ಬಸವರಾಜ ಸೇರಿದಂತೆ ನರೇಗಾ ಸಿಬ್ಬಂದಿ ಇದ್ದರು.