(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಅ.೩:ಮುಜರಾಯಿ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ರಾಜ್ಯದ ವಿವಿಧ ದೇವಾಲಯಗಳ ಅಭಿವೃದ್ಧಿಗೆ ಸುಮಾರು ೨೧ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ೩೯೨ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ೨೧,೪೦,೭೮,೦೦೦ ರೂ.ಗಳನ್ನು ಬಿಡುಗಡೆಗೆ ಆದೇಶಿಸಿರುವ ಮಾಡಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ದೇವಾಲಯಗಳ ಅಭಿವೃದ್ಧಿಗೆ ಈ ಅನುದಾನ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ನಗರದ ೫೮ ದೇವಸ್ಥಾನ, ಗ್ರಾಮಾಂತರ ಜಿಲ್ಲೆಯ ೭, ತುಮಕೂರಿನ ೧೦, ಶಿವಮೊಗ್ಗದ ೧೨೮, ಉಡುಪಿಯ ೧೦೨, ರಾಮನಗರದ ೨, ಧಾರವಾಡದ ೯೦, ಮೈಸೂರು ಬೆಳಗಾವಿ ಸೇರಿದಂತೆ ಒಟ್ಟು ೩೦೭ ದೇವಾಲಯಗಳ ಅಭಿವೃದ್ಧಿಗೆ ಈ ಎಲ್ಲ ಹಣವನ್ನು ಬಿಡುಗಡೆ ಮಾಡಲಾಗಿದೆ.
ಶೃಂಗೇರಿ ಶಾರದಾಪೀಠದ ಅಡಿಯಲ್ಲಿ ರುವ ಶ್ರೀ ಮಲಾಕಾನಿಕರೇಶ್ವರ ಸಮಗ್ರ ಅಭಿವೃದ್ಧಿ ಮತ್ತು ಹಾಗೂ ರಾಜಗೋಪುರ ನಿರ್ಮಾಣಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ೩ ಕೋಟಿ ಅನುದಾನ ಬಿಡುಗಡೆಗೆ ಹಿಂದಿನ ಸರ್ಕಾರ ಅನುಮೋದನೆ ನೀಡಿದ್ದರೂ ಹಣ ಬಿಡುಗಡೆಯಾಗಿರಲ್ಲಿ. ಈ ವಿಚಾರ ತಮ್ಮ ಗಮನಕ್ಕೆ ಬಂದ ಮೂರೇ ದಿನದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ೩ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಕಳೆದ ಶನಿವಾರ ನಡೆದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ರಾಮಲಿಂಗಾರೆಡ್ಡಿ ಅವರು ದೇವಾಲಯಗಳ ಅನುದಾನ ಬಿಡುಗಡೆಗೆ ಸೂಚಿಸಿದ್ದು, ಅದರಂತೆ ಈಗ ಆದೇಶ ಹೊರ ಬಿದ್ದಿದೆ.