ವಿವಿಧ ತಂಬಾಕು ಮಾರಾಟ ಮಳಿಗೆಗಳ ಮೇಲೆ ದಾಳಿ 31500 ದಂಡ ವಸೂಲಿ

ಬೀದರ, ಏ.30: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರತಿಕಾಂತ ಸ್ವಾಮಿ ಅವರ ಮಾರ್ಗದರ್ಶನದಂತೆ ಬೀದರ ಹಾಗೂ ತಾಲ್ಲೂಕುಗಳಲ್ಲಿ ತಂಬಾಕು ಮಾರಾಟ ಮಳಿಗೆಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಂಬಾಕು ಜಾಗೃತಿ ದಳದಿಂದ ಬೀದರ ಜಿಲ್ಲೆಯಾದ್ಯಂತ ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದ ಒಟ್ಟು 354 ಅಂಗಡಿಗಳ ಮೇಲೆ ದಾಳಿ ಮಾಡಿ 31,500 ರೂ. ದಂಡ ವಿಧಿಸಲಾಯಿತು.

ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾತೇಂಶ್.ಬಿ.ಉಳ್ಳಾಗಡ್ಡಿ ಇವರು ವ್ಯಾಪಾರಿಗಳಿಗೆ ತಮ್ಮ ಅಂಗಡಿಗಳಲ್ಲಿ ಕೇಂದ್ರ ಸರ್ಕಾರದಿಂದ ಈಗಾಗಲೇ ನಿಶೇದಿಸಲ್ಪಟ್ಟ ಸಿಗರೇಟ್‍ಗಳನ್ನು ಮಾರಾಟವನ್ನು ಮಾಡಬಾರದು ಎಂದು ಈ ಸಂದರ್ಬದಲ್ಲಿ ತಿಳಿಸಿದರು. ಈ ವಿಷಯವಾಗಿ ಸಾರ್ವಜನಿಕರಿಗೆ ಅದರಲ್ಲು ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಿಗರೇಟ್ ಹಾಗೂ ಮಾದಕ ವಸ್ತುಗಳ ಬಳಕೆ ಆರೋಗ್ಯದ ಮೇಲೆ ಗಂಭಿರ ಪರಿಣಾಮಗಳು ಬೀರುವುದರಿಂದ ಈ ಉತ್ಪನ್ನಗಳ ಬಳಕೆಯನ್ನು ಮಾಡದಿರುವಂತೆ ಜಾಗೃತರಾಗಲು ಮನವಿ ಮಾಡಿದರು.

ಈ ಜಾಗೃತಿ ದಾಳಿಯಲ್ಲಿ ತಾಲ್ಲೂಕಿನ ಎಲ್ಲಾ ಆರೋಗ್ಯ ಅಧಿಕಾರಿಗಳು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರಕಾಶ್. ವಗ್ಗೆ, ಸಮಾಜಕರ್ತ ಮಹೇಶ.ಬಿ ಕಾರ್ಮಿಕ ಇಲಾಖೆಯಿಂದ ಕೆ.ಸುವರ್ಣಾ, ಶಿಕ್ಷಣ ಇಲಾಖೆಯಿಂದ ಗುಂಡಪ್ಪಾ ಹುಡಗೇ, ಪೋಲಿಸ್ ಇಲಾಖೆಯ ಅಧಿಕಾರಿಗಳು ಈ ಜಾಗೃತಿ ದಾಳಿಯಲ್ಲಿ ಭಾಗವಹಿಸಿದರು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿಗಳಾದ ಡಾ: ಶಂಕರೆಪ್ಪಾ ಬೊಮ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.