ಬೀದರ, ಮಾ.25: ಬೀದರ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆಯುತ್ತಿದ್ದ, ಸಾಗಾಣಿಕೆ, ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 13 ಪ್ರಕರಣಗಳಲ್ಲಿ ಜಪ್ತಿ ಮಾಡಿದ ಓಟ್ಟು ಗಾಂಜಾ 999 ಕೆ.ಜಿ. 998 ಗ್ರಾಂ. ಗಾಂಜವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಗೆ ಪಡೆದುಕೊಂಡು ನಿಯಮಾನುಸಾರ ನಾಶಗೊಳಿಸಲು ಕ್ರಮವಹಿಸಿ ಬೀದರ ಜಿಲ್ಲೆಯ ಧನ್ನೂರ ಗ್ರಾಮದಲ್ಲಿರುವ ಇನ್ವೆರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ ಮಾರ್ಚ್ 24 ರಂದು ಸುಡಲಾಯಿತು.
ಬೀದರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಚೆನ್ನಬಸವಣ್ಣ. ಎಸ್.ಎಲ್ ಅವರ ಸಮ್ಮೂಖದಲ್ಲಿ ಪ್ರತಿ ಠಾಣೆಯ ಜಪ್ತಿಪಡಿಸಿದ ಗಾಂಜ ಬ್ಯಾಗಗಳನ್ನು ಪ್ರತಿಯೊಂದರಂತೆ ಖುದ್ದಾಗಿ ಪರಿಶಿಲಿಸಿ,ತುಕ ಮಾಡಿಸಿ ನಾಶಪಡಿಸಲು ಸೂಚಿಸಿದರು ಅವರು ಸಹ ಸ್ಥಳದಲ್ಲಿ ಮುಖ್ಖಾಮ ಹುಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ, ಭಾಲ್ಕಿ ಎ.ಎಸ್.ಪಿ. ಪ್ರಥ್ವಿಕ ಶಂಕರ, ಬೀದರ ಡಿ.ಎಸ್.ಪಿ. ಕೆ.ಎಮ್ .ಸತೀಷ್, ಪಿ.ಐ.ಪರುಶರಾಮ ವಾಂಜೆರಕರ, ಎಚ್‍ಸಿ ಡಿಸಿಆರ್‍ಬಿ ನಾಗನಾಥ, ಇನ್ವೆರೋ ಬಯೋಟೆಕ್ ತ್ಯಾಜ ವಿಲೇವಾರಿ ಘಟಕದ ವ್ಯವಸ್ಥಾಪಕ ಬಸವರಾಜ ಸೇರಿದಂತೆ ಜಿಲ್ಲೆಯ 7 ಠಾಣೆಯ ಪಿ.ಎಸ್.ಐ. ಹಾಗೂ ಬರಹಗಾರ ಸಿಬ್ಬಂದಿಯವರು ಉಪಸ್ಥಿತರಿದ್ದರು.