ವಿವಿಧ ಜಾತಿಯ ಗಿಡಗಳನ್ನು ನೀಡಿ ಪರಿಸರದ ಬಗ್ಗೆ ಜಾಗೃತಿ

ಮೈಸೂರು. ಮೇ.02: ಮೈಸೂರು ಯುವ ಬಳಗದ ವತಿಯಿಂದ ಮನೆಗೊಂದು ಗಿಡ ಅಭಿಯಾನಕ್ಕೆ ಲಕ್ಷ್ಮಿ ವಿಲಾಸ್ ರಸ್ತೆಯಲ್ಲಿರುವ ಮನೆ ಮನೆಗೆ ತೆರಳಿ 50 ಸಸಿಗಳನ್ನು ಹೊಂಗೆ, ದಾಸವಾಳ, ತುಳಸಿ, ಬಾದಾಮಿ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೀಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು
ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ ಎನ್ ನವೀನ್ ಕುಮಾರ್ ಈ ಮಹಾಮಾರಿ ಕೂರೂನಾ ಪೀಡಿತ ಕೆಲವರಿಗೆ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದೆ ಅದಕ್ಕೆ ಮುಖ್ಯ ಕಾರಣ ನಾವುಗಳೇ ಪ್ರಕೃತಿಯನ್ನು ಕಡೆಗಣಿಸುತ್ತಿರುವುದು ಹಾಗೂ ಮರ ಗಿಡಗಳನ್ನು ನಾಶ ಮಾಡುವ ಮೂಲಕ ಮನುಷ್ಯನ ಅನುಕೂಲಕ್ಕೆ ತಕ್ಕಂತೆ ಜೀವನ ನಡೆಸುತ್ತಿದ್ದೇವೆ , ಪರಿಸರದಲ್ಲಿ ವಾಯುಮಾಲಿನ್ಯ ಮತ್ತು ತಾಪಮಾನದಿಂದ ವಾತಾವರಣ ಕಲುಷಿತವಾಗುತ್ತಿದೆ ಮತ್ತು ಕೊರೊನಾ ಮಹಾಮಾರಿಯಿಂದ ಮಾನವರು ಪ್ರಾಣವನ್ನ ರಕ್ಷಿಸಿಕೊಳ್ಳಬೇಕಾದರೆ ಗಿಡಮರಗಳು ಇದ್ದರೆ ಮಾತ್ರ ಸಾಧ್ಯ ಎಂದು ಅರಿವಾಗಿದೆ, ನಮ್ಮ ಸುತ್ತಮುತ್ತಲು ಗಿಡಗಳ ಪೆÇೀಷಣೆ ಮಾಡುವ ಪರಿಸರ ಸಂರಕ್ಷಣೆ ಕಾಳಜಿ ಬೆಳಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ ಎನ್ ನವೀನ್ ಕುಮಾರ್ ,ಮೈಸೂರು ಯುವ ಬಳಗದ ನವೀನ್, ಕಾಂತಿಲಾಲ್ ಜೈನ್ , ಪ್ರಮೋದ್ ಗೌಡ, ಪ್ರಶಾಂತ್ ,ಹಾಗೂ ಇನ್ನಿತರರು ಹಾಜರಿದ್ದರು.